ಕನ್ಯಾನ : ಅಪ್ರಾಪ್ರ ಬಾಲಕಿ ಆತ್ಯಹತ್ಯೆ, ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಯುವಕನ ವಿರುದ್ದ ದೂರು ದಾಖಲು - Karavali Times ಕನ್ಯಾನ : ಅಪ್ರಾಪ್ರ ಬಾಲಕಿ ಆತ್ಯಹತ್ಯೆ, ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಯುವಕನ ವಿರುದ್ದ ದೂರು ದಾಖಲು - Karavali Times

728x90

4 May 2022

ಕನ್ಯಾನ : ಅಪ್ರಾಪ್ರ ಬಾಲಕಿ ಆತ್ಯಹತ್ಯೆ, ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಯುವಕನ ವಿರುದ್ದ ದೂರು ದಾಖಲು

  ಬಂಟ್ವಾಳ, ಮೇ 05, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಕನ್ಯಾನ ಗ್ರಾಮದ ಕಾಣಿಯೂರು ಮಸೀದಿ ಹಿಂಭಾಗದ ದಿವಂಗತ ಸುಲೈಮಾನ್ ಫೈಝಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕಾರ್ಮಿಕ ಸಂಜೀವ ಅವರ 14 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆಕೆಯನ್ನು ಪ್ರೀತಿಸುವಂತೆ ಬಲವಂತಪಡಿಸಿ ಕೃತ್ಯಕ್ಕೆ ದುಷ್ಪ್ರೇರಣೆ ನೀಡಿದ್ದಾನೆ ಎಂಬ ಆರೋಪದಲ್ಲಿ ಕಣಿಯೂರು ತಲೆಕ್ಕಿ ನಿವಾಸಿ ಶಾಹುಲ್ ಹಮೀದ್ (30) ಎಂಬಾತನ ವಿರುದ್ದ ಬಾಲಕಿಯ ಹೆತ್ತವರ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 ಬುಧವಾರ ಬೆಳಿಗ್ಗೆ 8 ಗಂಟೆಗೆ ಎಂದಿನಂತೆ ಬಾಲಕಿಯ ಹೆತ್ತವರು ಕೂಲಿ ಕೆಲಸಕ್ಕೆಂದು ಹೋಗಿದ್ದು, ಮಗ ಕಾರ್ತಿಕ್ ಔಷಧಗೆಂದು‌ ಹೊರ ಹೋಗಿದ್ದ. ಈ ವೇಳೆ ಬಾಲಕಿ ಮಾತ್ರ ಮನೆಯಲ್ಲಿದ್ದಳು ಎನ್ನಲಾಗಿದೆ. ಹೆತ್ತವರು ಬೆಳಿಗ್ಗೆ ಸುಮಾರು 11.15 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಲಕಿ ಮನೆಯ ನಡುವಿನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ. 

 ಈಕೆಯ ಕೃತ್ಯಕ್ಕೆ ಆರೋಪಿ ಸಾಹುಲ್ ಹಮೀದ್ ಅಲಿಯಾಸ್ ಕುಟ್ಟ ಎಂಬಾತನ ದುಷ್ಪ್ರೇರಣೆ ಕಾರಣ ಎಂದು ಆರೋಪಿಸಿದ ಹೆತ್ತವರು ಆತನ ವಿರುದ್ದ ದೂರು ದಾಖಲಾಗಿದೆ. 

 ಶಾಹುಲ್ ಹಮೀದ್ ಬಾಲಕಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈ ವಿಚಾರ ಹೆತ್ತವರಿಗೆ ತಿಳಿದು ಮಗಳು ದೀರ್ಘ ಕಾಲ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಅವಳ ಮೊಬೈಲನ್ನು ಪರಿಶೀಲಿಸಲಾಗಿ ಮಗಳು ಮೊಬೈಲ್ ನಲ್ಲಿ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಎಂಬಾತನೊಂದಿಗೆ ಮಾತನಾಡುತ್ತಿರುವುದನ್ನು ಖಚಿತಪಡಿಸಿ ಮಗಳ ಮೊಬೈಲ್ ತೆಗೆದಿರಿಸಿ ಆಕೆಗೆ ಬುಧ್ಧಿವಾದ ಹೇಳಿದ್ದರು. 

ಸಾಹುಲ್ ಹಮೀದ್ ಹಾಗೂ ಆತನ ಅಣ್ಣನನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಆತನಿಗೆ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಸಾಹುಲ್ ಹಮೀದ್ ಪದೇ ಪದೇ ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯ ಆಕೆಯ ಮನೆಗೆ ಬಂದು ಭೇಟಿಯಾಗಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನಲ್ಲದೆ ನೀನು ನಿನ್ನ ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ಬರಬೇಕು. ನೀನು ಬರುವುದಿಲ್ಲವಾದರೆ ಸಾಯು ಎಂದು ಹೇಳಿರುವುದನ್ನು ಆಕೆ ಹೆತ್ತವರಲ್ಲಿ ಹೇಳಿಕೊಂಡಿದ್ದಳು. 

ಅದಕ್ಕೆ ನಿನ್ನ ವಿಷಯಕ್ಕೆ ಆತನು ಬಾರದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಮಗಳನ್ನು ಸಮಾದಾನಪಡಿಸಿದ್ದರು. ಆದರೂ ಮನೆಯಲ್ಲಿದ್ದ ಮಗಳನ್ನು ಆರೋಪಿ ಸಾಹುಲ್ ಹಮೀದ್ @ ಕುಟ್ಟ ಎಂಬಾತನು ಬಾಲಕಿ ಕುಟುಂಬ ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದಿದ್ದರೂ ಕೂಡಾ ಆಕೆಯ ಮನಸ್ಸು ಕೆಡಿಸಿ ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದುದರಿಂದ ಹಾಗೂ ನೀನು ನಿನ್ನ ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ನೀನು ಬಾ, ನೀನು ಬರುವುದಿಲ್ಲವಾದರೆ ಸಾಯಿ ಎಂದು ದುಷ್ಪ್ರೇರಿಸುತ್ತಿದ್ದರಿಂದ ಆಕೆ ಮನನೊಂದು ಈ ಕೃತ್ಯ ಎಸಗಿರುವುದಾಗಿ ಬಾಲಕಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

 ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2022 ಕಲಂ 305 IPC & -3 (2)(v), 3(2)(va) The SC & ST (Prevention of Atrocities) Amendment Act 2015 ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕನ್ಯಾನ : ಅಪ್ರಾಪ್ರ ಬಾಲಕಿ ಆತ್ಯಹತ್ಯೆ, ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಯುವಕನ ವಿರುದ್ದ ದೂರು ದಾಖಲು Rating: 5 Reviewed By: karavali Times
Scroll to Top