ಬಂಟ್ವಾಳ, ಮೇ 21, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ನಾಡು ಗ್ರಾಮದ ಕಟ್ಟೆ ಮನೆ ನಿವಾಸಿ ಕೆ ಎಂ ಮುಹಮ್ಮದ್ ಅವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳ್ಳತನ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಹಮ್ಮದ್ ಅವರು ಮೇ 19 ರಂದು ಗುರುವಾರ ಸಂಜೆ ಸಜಿಪನಡು ಗ್ರಾಮದ ಗೋಳಿಪಡ್ಪುವಿನ ತಂಗಿಯ ಮನೆಗೆ ಕುಟುಂಬ ಸಮೇತರಾಗಿ ತೆರಳಿದ್ದು, ಮೇ 20 ರಂದು ಶುಕ್ರವಾರ ಸಂಜೆ ವೇಳೆಗೆ ಮನೆಗೆ ಹಿಂತಿರುಗಿದ ವೇಳೆ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಮಾಡಿನ ಹಂಚು ತೆಗೆದು ಒಳಗೆ ಪ್ರವೇಶಿಸಿದ ಕಳ್ಳರು ಮಲಗುವ ಕೋಣೆ ಪ್ರವೇಶೀಸಿ ಅಲ್ಲಿದ್ದ ಕಪಾಟಿನ ಬೀಗ ಒಡೆದು ಸುಮಾರು 5 ಪವನ್ ತೂಕದ ಚಿನ್ನದ ನೆಕ್ಲೇಸ್, 1 ಪವನ್ ತೂಕದ ಚಿನ್ನದ ಸರ, ಅರ್ಧ ಪವನ್ ತೂಕದ ಚಿನ್ನದ ಉಂಗುರ ಹಾಗೂ ಪಕ್ಕದ ಮೇಜಿನ ಡ್ರಾವರಿನಲ್ಲಿಟ್ಟಿದ್ದ 5 ಸಾವಿರ ರೂಪಾಯಿ ನಗದು ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ಕಳವಾಗಿರುವ ಒಟ್ಟು ಸೊತ್ತುಗಳ ಮೌಲ್ಯ ಸುಮಾರು 1.40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2022 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment