ಬೆಳ್ತಂಗಡಿ, ಮೇ 22, 2022 (ಕರಾವಳಿ ಟೈಮ್ಸ್) : ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಹಳೆ ಸೇತುವೆಯ ಬಳಿ ರಸ್ತೆ ಬದಿ ಸುಮಾರು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸು ನರಳಾಡುತ್ತಿದ್ದು, ಅವರ ಬಾಯಿಯಿಂದ ಘಾಟು ವಾಸನೆ ಹಾಗೂ ನೊರೆ ಬರುತ್ತಿದ್ದುದ್ದನ್ನು ನೋಡಿದ ಸ್ಥಳೀಯ ನಿವಾಸಿ ರಾಘವ ಎಂಬವರು ಅವರನ್ನು 108 ಅಂಬುಲೆನ್ಸ್ ಮೂಲಕ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆದರೆ ವ್ಯಕ್ತಿಯು ದಾರಿ ಮದ್ಯೆ ಮೃತಪಟ್ಟಿರುತ್ತಾರೆ. ಇವರು ಯಾವುದೋ ಕಾರಣಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಯು ಡಿ ಆರ್ ಕ್ರಮಾಂಕ 31/2022 ಕಲಂ 174 ಸಿಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment