ಬಂಟ್ವಾಳ, ಮೇ 21, 2022 (ಕರಾವಳಿ ಟೈಮ್ಸ್) : 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಬೋಳಂತೂರು ಗ್ರಾಮದ ಎನ್ ಸಿ ರೋಡು ನಿವಾಸಿ, ಕೊಣಾಜೆ ವಿಶ್ವಮಂಗಳ ಪ್ರೌಢಶಾಲಾ ವಿದ್ಯಾರ್ಥಿ ಶಾಝಿನ್ ಅಬ್ದುಲ್ ರಝಾಕ್ ಬೀರಾನ್ ಮೊೈದಿನ್ 623 ಅಂಕಗಳನ್ನು ಗಳಿಸಿ ಶೇ 99.68 ಫಲಿತಾಂಶ ದಾಖಲಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾನೆ.
ಈತ ಬೋಳಂತೂರು-ಎನ್ ಸಿ ರೋಡು ನಿವಾಸಿ ಡಾ ಬೀರಾನ್ ಮೊೈದಿನ್ ಬಿ ಎಂ-ಶಾಹಿದಾ ಬೀರಾನ್ ಕಲ್ಲಾಜೆ ದಂಪತಿಯ ಪುತ್ರನಾಗಿದ್ದಾನೆ. ಈತ ಕಲಿಕೆಯಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಾದ ಜಿಲ್ಲಾ ಮಟ್ಟದ ಕ್ಷಿಝ್, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾನೆ.
0 comments:
Post a Comment