ಬಂಟ್ವಾಳ, ಮೇ 17, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಹಲವೆಡೆ ಮಳೆಹಾನಿ ಪ್ರಕರಣಗಳು ವರದಿಯಾಗಿದೆ.
ಬಂಟ್ವಾಳ ಕಸಬಾ ಗ್ರಾಮದ ಬಾರೇಕಾಡು ನಿವಾಸಿಗಳಾದ ರಹಮತ್ ಹಾಗೂ ಐಸಮ್ಮ ಅವರ ಮನೆಯ ಸಿಮೆಂಟು ಶೀಟುಗಳಿಗೆ ಹಾನಿ ಸಂಭವಿಸಿದೆ. ಕಾರೀಂಜೇಶ್ವರ ಕ್ಷೇತ್ರದ ಸನ್ನಿಧಿ ಬಳಿ ಸಡಿಲಗೊಂಡು ನಿಂತಿದ್ದ ಬಂಡೆ ಕಲ್ಲು ಜಾರಿ ಕೆಳಗಿನ ಮಾರ್ಗದಲ್ಲಿ ಬಂದು ಬಿದ್ದಿದೆ. ಅಮ್ಟಾಡಿ ಗ್ರಾಮದ ಪೆದಮಲೆ ನಿವಾಸಿ ರಿಚರ್ಡ್ ಪಿಂಟೋ ಅವರ ಮನೆಯ ಪಕ್ಕದಲ್ಲಿರುವ ಬರೆ ಜರಿದಿರುತ್ತದೆ. ಅದೇ ರೀತಿ ಅಪ್ಪಿ ಕೋಂ ವೆಂಕಪ್ಪ ಅವರ ವಾಸ್ತವ್ಯದ ಮನೆಗೂ ಬರೆ ಜರಿದು ಬಿದ್ದು ಭಾಗಶಃ ಹಾನಿಯಾಗಿರುತ್ತದೆ ಎಂದು ತಾಲೂಕು ಕಚೇರಿ ಪ್ರಕೃತಿ ವಿಕೋಪ ಶಾಖಾ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ.
0 comments:
Post a Comment