ಬಂಟ್ವಾಳ, ಮೇ 23, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ವಿವಿ ರಸ್ತೆಯ ಎಂ.ಎಚ್. ಹೈಟ್ಸ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಆರ್.ಜೆ. ಗೋಲ್ಡ್ ಚಿನ್ನಾಭರಣ ಮಳಿಗೆ ವಿಸ್ತೃತಗೊಂಡು ಮೇ 26 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶುಭಾರಂಭಗೊಳ್ಳಲಿದೆ.
ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಹಾಗೂ ಕೆ.ಪಿ. ಇರ್ಶಾದ್ ದಾರಿಮಿ ಅಲ್-ಜಝರಿ ಅವರುಗಳ ದುವಾಶೀರ್ವಾದಗಳೊಂದಿಗೆ ಸಂಸ್ಥೆ ಶುಭಾರಂಭಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್, ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ಉಪನಾಯಕ, ಮಂಗಳೂರು ಶಾಸಕ ಯು ಟಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಸದಸ್ಯರುಗಳಾದ ಮೂನಿಶ್ ಅಲಿ, ಇದ್ರೀಸ್ ಪಿ ಜೆ ಅವರುಗಳು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ದಿನ ಶುಭಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಮ್ಮುಖದಲ್ಲಿ ಲಕ್ಕಿ ಡ್ರಾ ನಡೆಯಲಿದ್ದು, ಸಮಾರಂಭದಲ್ಲಿ ಭಾಗವಹಿಸಿ ವಿಜೇತರಾಗುವವರಿಗೆ ವಿಶೇಷ ಬಹುಮಾನ ನೀಡಲಾಗುವುದು.
ಸರಕಾರದ ನಿಯಮ ಪ್ರಕಾರ ಬಿಸ್ ಹಾಲ್ ಮಾರ್ಕ್ 916 (22ಕೆ) ಪರಿಶುದ್ದವಾದ ಅತೀ ಕಡಿಮೆ ಮೇಕಿಂಗ್ ಚಾರ್ಜಿನಲ್ಲಿ ಗ್ರಾಗಕರ ವಿಶ್ವಾಸಕ್ಕೆ ಅನುಕೂಲವಾಗಿ ವಿವಿಧ ಡಿಸೈನುಗಳು, ಸಂಸ್ಥೆಯು ಲೋಕೋತ್ತರ ಡಿಸೈನುಗಳಾದ ಟರ್ಕಿ, ಆಂಟಿಕ್, ಕುಂದನ್, ಸಿಗ್‍ನಿಟಿಕ್, ಒರೋ, ರಾಜ್‍ಕೋಟ್, ಕಲ್ಕತ್ತಾ, ಕೇರಳ ಕಲೆಕ್ಷನ್ ಗಳ ಅತೀ ವಿಶಾಲವಾದ ಶೇಖರಣೆಯನ್ನು ಹೊಂದಿರುತ್ತದೆ. ಚಿನ್ನಾಭರಣ ಮಜೂರಿಯಲ್ಲಿ 35% ಫ್ಲ್ಯಾಟ್ ಡಿಸ್ಕೌಂಟ್ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತ ತಿಳಿಸಿದೆ.
0 comments:
Post a Comment