ಪುತ್ತೂರಿನ ವಿದ್ಯಾರ್ಥಿ, ಯುವ ಕಲಾವಿದ ನಿಯಾಸ್ ಅಲಿ ಕಲಾಕೃತಿಗಳು ಸ್ಟಾರ್ ಸ್ಪೋಟ್ಸ್ ವಾಹಿನಿಯಲ್ಲಿ ಪ್ರಸಾರ - Karavali Times ಪುತ್ತೂರಿನ ವಿದ್ಯಾರ್ಥಿ, ಯುವ ಕಲಾವಿದ ನಿಯಾಸ್ ಅಲಿ ಕಲಾಕೃತಿಗಳು ಸ್ಟಾರ್ ಸ್ಪೋಟ್ಸ್ ವಾಹಿನಿಯಲ್ಲಿ ಪ್ರಸಾರ - Karavali Times

728x90

16 May 2022

ಪುತ್ತೂರಿನ ವಿದ್ಯಾರ್ಥಿ, ಯುವ ಕಲಾವಿದ ನಿಯಾಸ್ ಅಲಿ ಕಲಾಕೃತಿಗಳು ಸ್ಟಾರ್ ಸ್ಪೋಟ್ಸ್ ವಾಹಿನಿಯಲ್ಲಿ ಪ್ರಸಾರ

 ಪುತ್ತೂರು, ಮೇ 17, 2022 (ಕರಾವಳಿ ಟೈಮ್ಸ್) : ತಾಲೂಕಿನ ಈಶ್ವರಮಂಗಳ-ಕರ್ನೂರು ನಿವಾಸಿ, ಪುತ್ತೂರು ಮೇಧಾ ಕಾಲೇಜು ವಿದ್ಯಾರ್ಥಿ ನಿಯಾಸ್ ಅಲಿ ಬಿ ಎಂ ರಚಿಸಿದ ಕ್ರಿಕೆಟ್ ಆಟಗಾರರಾದ ರೋಹಿತ್ ಹಾಗೂ ರಿಷಭ್ ಪಂಥ್ ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಕಲಾಕೃತಿಯನ್ನು ಸ್ಟಾರ್ಟ್ ಸ್ಪೋರ್ಟ್ ಹಿಂದಿ ಹಾಗೂ ಕನ್ನಡ ಟಿವಿ ವಾಹಿನಿಗಳು ಪ್ರಸಾರ ಮಾಡಿ ಬೆಂಬಲ ವ್ಯಕ್ತಪಡಿಸಿದೆ. 

 ಪುತ್ತೂರು ತಾಲೂಕಿನ ಈಶ್ವರಮಂಗಳ ಸಮೀಪದ ಕರ್ನೂರು ನಿವಾಸಿ ಮುಹಮ್ಮದ್ ಬಿ- ನೆಬಿಸಾ ದಂಪತಿಯ ಪುತ್ರನಾಗಿರುವ ಈತ‌ ಪ್ರಸ್ತುತ ಪುತ್ತೂರಿನ ಮೇಧಾ ಕಾಲೇಜಿನ ಮೂರನೇ ವರ್ಷದ ಬಿಎಸ್ಸಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೋರೇಷನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. 

ಈತನ ajuz_art ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ವ್ಯತ್ಯಸ್ತ ಶೈಲಿಯ ಚಿತ್ರಕಲೆಗಳು ಕಲಾಕಾರರ, ಕಲಾಪ್ರಿಯರ, ಕಲಾಭಿಮಾನಿಗಳ ಮನಗೆದ್ದಿದ್ದು, ಭಾರೀ ಪ್ರಮಾಣದಲ್ಲಿ ಲೈಕ್, ಕಮೆಂಟ್ ಹಾಗೂ ಶೇರ್ ಪಡೆದುಕೊಳ್ಳುತ್ತಿದೆ. 

 ಈತನ ಇನ್ಸ್ಟಾಗ್ರಾಂ ಖಾತೆ ಈ ರೀತಿ ಇದೆ ... ತಾವೂ ವೀಕ್ಷಿಸಬಹುದು.... https://instagram.com/ajuz_art?igshid=YmMyMTA2M2Y=

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರಿನ ವಿದ್ಯಾರ್ಥಿ, ಯುವ ಕಲಾವಿದ ನಿಯಾಸ್ ಅಲಿ ಕಲಾಕೃತಿಗಳು ಸ್ಟಾರ್ ಸ್ಪೋಟ್ಸ್ ವಾಹಿನಿಯಲ್ಲಿ ಪ್ರಸಾರ Rating: 5 Reviewed By: karavali Times
Scroll to Top