ಬಂಟ್ವಾಳ, ಮೇ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಎಲ್ಪೇಲು ಬಳಿ ಪೂಂಜಾಲಕಟ್ಟೆ ಠಾಣಾ ಎಸ್ಸೈ ಸುತೇಶ್ ಕೆ ಪಿ ಅವರು ಸಿಬ್ಬಂದಿ ಜೊತೆ ಭಾನುವಾರ ಮುಂಜಾನೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮ ಜಾನುವಾರು ಸಾಗಾಟ ಬೇಧಿಸಿ ವಾಹನ, ಜಾನುವಾರುಗಳ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮಾತ್ರ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ವಾಮದಪದವು ಕಡೆಯಿಂದ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯಂತೆ ಪೂಂಜಾಲಕಟ್ಟೆ ಠಾಣಾ ಎಸ್ಸೈ ನೇತೃತ್ವದ ಪೊಲೀಸರು ಮುಂಜಾನೆ ಸಮಯ ಸುಮಾರು 4.15ರ ವೇಳೆಗೆ ವಾಮದಪದವು ಕಡೆಯಿಂದ ಕುದ್ಕೋಳಿ ಕಡೆಗೆ ಟಾಟಾ ಇನ್ಟ್ರಾ ವಿ10 ಗೂಡ್ಸ್ ಮಿನಿ ಟೆಂಪೆÇೀ ಅತೀ ವೇಗವಾಗಿ ಬರುತ್ತಿದ್ದುದ್ದನ್ನು ಗಮನಿಸಿ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ಕೂಡಾ ವಾಹನವನ್ನು ನಿಲ್ಲಿಸದೇ ಮುಂದೆ ಸಾಗಿದ್ದಾರೆ. ತಕ್ಷಣ ಪೊಲೀಸರು ಇಲಾಖಾ ವಾಹನದಲ್ಲಿ ಜಾನುವಾರು ಸಾಗಾಟದ ವಾಹನವನ್ನು ಬೆನ್ನಟ್ಟಿ ಕುದ್ಕೋಳಿ ಜಂಕ್ಷನ್ ಬಳಿ ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭ ಆರೋಪಿಗಳು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದಾಗ ಪೊಲೀಸರು ಜೀಪಿನಿಂದ ಇಳಿದು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದ್ದು, ಆರೋಪಿಗಳು ಪೊಲೀಸರನ್ನು ದೂಡಿ ಹಾಕಿ ಪರಾರಿಯಾಗಿದ್ದಾರೆ. ಈ ಆರೋಪಿಗಳ ದಾಳಿ ವೇಳೆ ನೆಲಕ್ಕೆ ಬಿದ್ದ ಎಸ್ಸೈ ಸುತೇಶ್ ಅವರು ನೆಲಕ್ಕೆ ಬಿದ್ದು, ಬಲ ಕೈಯ ಭುಜದ ಭಾಗಕ್ಕೆ ಗಾಯವಾಗಿದೆ. ಆರೋಪಿಗಳು ಬಿಟ್ಟು ಹೋದ ವಾಹನವನ್ನು ಪೊಲೀಸರು ಪರರಿಶೀಲನೆ ನಡೆಸಿದ್ದು, ವಾಹನ ಸಹಿತ ವಾಹನದಲ್ಲಿದ್ದ 3 ದನಗಳನ್ನು ಹಾಗೂ 2 ವಿವೋ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 6.40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2022 ಕಲಂ 4, 5, 8, 12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 1964 ಮತ್ತು ಕಲಂ 11(1)(ಡಿ) ಪ್ರಾಣಿ ಹಿಂಸೆ ತಡೆ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ ಕಾಯ್ದೆ 1960 ಹಾಗೂ ಕಲಂ 66 ಜೊತೆಗೆ 192 (ಎ) ಐ ಎಂ ವಿ ಕಾಯ್ದೆ, ಕಲಂ 41(1)(ಡಿ) ಜೊತೆಗೆ 102 ಸಿಆರ್‍ಪಿಸಿ ಮತ್ತು 379, 186, 353, 323 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment