ಬಂಟ್ವಾಳ, ಮೇ 26, 2022 (ಕರಾವಳಿ ಟೈಮ್ಸ್) : ತಾಲೂಕಿನ ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ಬಂಟ್ವಾಳ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ಗುರುತಿಸಿ ಅವರ ತಳಮಟ್ಟದ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದೇ ವೇಳೆ ಕೊಡಂಗೆ ಸರಕಾರಿ ಪ್ರೌಢಶಾಲೆ ಹಾಗೂ ಮೊಡಂಕಾಪು ದೀಪಿಕಾ ಪ್ರೌಢಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರ, ರಾಯಿ ಆನಾರೋಗ್ಯ ಪೀಡಿತ ಕುಟುಂಬಕ್ಕೆ ಸಹಾಯಧನ, ಬಾಳ್ತಿಲ ಬಡ ಕುಟುಂಬದ ಮನೆಗೆ ಟೈಲ್ಸ್ ಅಳವಡಿಕೆ, ಸ್ವಚ್ಛ ಭಾರತ ಜಾಗೃತಿ ಅಭಿಯಾನ ಬ್ಯಾನರ್ ಅನಾವರಣಗೊಳಿಸುವ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಮಾಜಿ ಸಚಿವ ಬಿ ರಮಾನಾಥ ರೈ, ಮೊಡಂಕಾಪು ಚರ್ಚ್ ಧರ್ಮಗುರು ವಲೇರಿಯನ್ ಡಿ’ಸೋಜ, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿ’ಮೆಲ್ಲೋ, ರೋಟರಿ ಜಿಲ್ಲಾ ಗವರ್ನರ್ ಎ ಆರ್ ರವೀಂದ್ರ ಭಟ್, ಕ್ಲಬ್ ನಿಯೋಜಿತ ಅಧ್ಯಕ್ಷ ಡಾ ಗೋವರ್ಧನ ರಾವ್, ಸಹಾಯಕ ಗವರ್ನರ್ ಸುರೇಂದ್ರ ಕಿಣಿ, ವಲಯ ಕಾರ್ಯದರ್ಶಿ ಜಯರಾಮ ರೈ, ಕ್ಲಬ್ ಮಾರ್ಗದರ್ಶಕ ಬಿ ಸಂಜೀವ ಪೂಜಾರಿ, ಕ್ಲಬ್ ಅಧ್ಯಕ್ಷ ಎಲಿಯಾಸ್ ಸ್ಯಾಂಕ್ಟಿಸ್, ಕಾರ್ಯದರ್ಶಿ ಪಿ ಎ ರಹೀಂ, ಪದಾಧಿಕಾರಿ ಅಹ್ಮದ್ ಮುಸ್ತಫಾ ಗೋಳ್ತಮಜಲು, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment