ಅಪರಿಚಿತ ಕರೆಗಳ ಸಂಖ್ಯೆ ಗುರುತಿಸಲು ಇನ್ನು ಮುಂದೆ ಟ್ರೂ ಕಾಲರ್ ನಂತಹ ಆಪ್ ಅಗತ್ಯವಿಲ್ಲ, ಕೆವೈಸಿ ಆಧಾರಿತ ಹೊಸ ವ್ಯವಸ್ಥೆ ಜಾರಿಗೊಳಿಸಲಿದೆ ಟ್ರಾಯ್ - Karavali Times ಅಪರಿಚಿತ ಕರೆಗಳ ಸಂಖ್ಯೆ ಗುರುತಿಸಲು ಇನ್ನು ಮುಂದೆ ಟ್ರೂ ಕಾಲರ್ ನಂತಹ ಆಪ್ ಅಗತ್ಯವಿಲ್ಲ, ಕೆವೈಸಿ ಆಧಾರಿತ ಹೊಸ ವ್ಯವಸ್ಥೆ ಜಾರಿಗೊಳಿಸಲಿದೆ ಟ್ರಾಯ್ - Karavali Times

728x90

23 May 2022

ಅಪರಿಚಿತ ಕರೆಗಳ ಸಂಖ್ಯೆ ಗುರುತಿಸಲು ಇನ್ನು ಮುಂದೆ ಟ್ರೂ ಕಾಲರ್ ನಂತಹ ಆಪ್ ಅಗತ್ಯವಿಲ್ಲ, ಕೆವೈಸಿ ಆಧಾರಿತ ಹೊಸ ವ್ಯವಸ್ಥೆ ಜಾರಿಗೊಳಿಸಲಿದೆ ಟ್ರಾಯ್

ನವದೆಹಲಿ, ಮೇ 23, 2022 (ಕರಾವಳಿ ಟೈಮ್ಸ್) : ಇನ್ನು ಮುಂದೆ ಮೊಬೈಲಿನಲ್ಲಿ ಸೇವ್ ಮಾಡಿರದ ಸಂಖ್ಯೆಯಲ್ಲಿ ಕರೆ ಮಾಡಿದವರ ಹೆಸರು ತಿಳಿಯಲು ಟ್ರೂ ಕಾಲರ್ ನಂತಹ ಆಪ್ ಡೌನ್ ಲೋಡ್ ಮಾಡಬೇಕಾಗಿಲ್ಲ. ಅಪರಿಚಿತ ಸಂಖ್ಯೆಗಳ ಕರೆಗಳ ಹೆಸರು ಪತ್ತೆಗೆ ದೂರ ಸಂಪರ್ಕ ಇಲಾಖೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಹೊರತರಲಿದೆ. ಈ ನೂತನ ವ್ಯವಸ್ಥೆಯಂತೆ ಯಾರು ಕರೆ ಮಾಡುತ್ತಾರೋ ಅವರ ಕೆವೈಸಿ (ಕ್ನೊ ಯುವರ್ ಕಸ್ಟಮರ್) ದಾಖಲೆ ನೀಡುವ ವೇಳೆ ದಾಖಲೆಯಲ್ಲಿರುವ ಹೆಸರೇ ಮೊಬೈಲ್ ಡಿಸ್ಪ್ಲೇ ಮೇಲೆ ಮೂಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಟೆಲಿಕಾಂ ಆಪರೇಟರ್‍ಗಳಿಗೆ ಜನರು ಕೆವೈಸಿ ದಾಖಲೆಯನ್ನು ನೀಡುವಾಗ ದಾಖಲೆಯಲ್ಲಿ ಯಾವ ಹೆಸರಿದೆಯೋ ಅದೇ ಹೆಸರು ಮೊಬೈಲ್ ಪರದೆ ಮೇಲೆ ಕಾಣಿಸಲಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧ್ಯಕ್ಷ ವಘೇಲಾ ಮಾಹಿತಿ ನೀಡಿದ್ದಾರೆ. 

ನಾವು ಕೆವೈಸಿ ದಾಖಲೆಯಲ್ಲಿ ನೀಡಿದ ಹೆಸರೇ ಕರೆಯ ಮಾಹಿತಿಯಲ್ಲಿ ಕಾಣಿಸುವಂತೆ ಮಾಡಲಿದ್ದು, ಈ ಸೇವೆ ಶೀಘ್ರವೇ ಆರಂಭವಾಗಲಿದೆ. ಇದರ ಪ್ರಕಾರ ಯಾರಾದರೂ ಕರೆ ಮಾಡಿದಾಗ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕೆವೈಸಿ ದಾಖಲೆ ಪ್ರಕಾರವೇ ಅವರ ಹೆಸರು ಕಾಣಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಮೊಬೈಲ್‍ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದಾಗ ಅಥವಾ ಸೇವ್ ಇಲ್ಲದ ಸಂಖ್ಯೆಯಿಂದ ಕರೆ ಬಂದಾಗ, ಕೆವೈಸಿ ಆಧಾರದ ಮೇಲೆ ಅವರ ಹೆಸರು ತಿಳಿಯಬಹುದು. ಸದ್ಯ ಬಳಕೆದಾರರು ಅಪರಿಚಿತ ಕರೆ ಮಾಡುವವರನ್ನು ತಿಳಿಯಲು ಟ್ರೂಕಾಲರ್‍ನಂತಹ ಆಪ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೂ ಈ ಆಪ್ ನೀಡುವ ಹೆಸರು ಪರಿಪೂರ್ಣ ಸರಿ ಅಥವಾ ಅಧಿಕೃತವಾಗಿರುವುದಿಲ್ಲ. ಆದರೆ ಈ ಹೊಸ ವ್ಯವಸ್ಥೆ ಕೆವೈಸಿ ಡೇಟಾದಿಂದ ಜನರ ಹೆಸರನ್ನು ಅಧಿಕೃತವಾಗಿ ತಿಳಿಸಲಿದೆ.

ಈವರೆಗೆ ಟ್ರಾಯ್ ಸ್ಪ್ಯಾಮ್ ಅಥವಾ ಬೇಡದ ಕರೆಗಳನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಸ್ಪ್ಯಾಮ್ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗಿರಲಿಲ್ಲ. ಇದೀಗ ಬರಲಿರುವ ಹೊಸ ವಿಧಾನದಿಂದ ಸ್ಪ್ಯಾಮ್ ಕರೆಗಳನ್ನು ಜನರೇ ತಿಳಿದು ತಪ್ಪಿಸಲು ಸಾಧ್ಯವಾಗಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಪರಿಚಿತ ಕರೆಗಳ ಸಂಖ್ಯೆ ಗುರುತಿಸಲು ಇನ್ನು ಮುಂದೆ ಟ್ರೂ ಕಾಲರ್ ನಂತಹ ಆಪ್ ಅಗತ್ಯವಿಲ್ಲ, ಕೆವೈಸಿ ಆಧಾರಿತ ಹೊಸ ವ್ಯವಸ್ಥೆ ಜಾರಿಗೊಳಿಸಲಿದೆ ಟ್ರಾಯ್ Rating: 5 Reviewed By: karavali Times
Scroll to Top