ಬಂಟ್ವಾಳ, ಮೇ 06, 2022 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಸಮೀಪದ ಕೊಡಾಜೆ ಜಂಕ್ಷನ್ನಿನ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟೋಯಿಂಗ್ ವಾಹನವೊಂದು ಗುರುವಾರ ಮಧ್ಯ ರಾತ್ರಿ ವೇಳೆಗೆ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಬಸ್ ನಿಲ್ದಾಣ, ಅಂಗಡಿ ಹಾಗೂ ಹೋಟೆಲಿಗೆ ಡಿಕ್ಕಿ ಹೊಡೆದಿದ್ದು, ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಪುತ್ತೂರು ಕಡೆಯಿಂದ ಮಂಗಳೂರು ಸಂಚರಿಸುತ್ತಿದ್ದ ಟೋಯಿಂಗ್ ಲಾರಿ ಕೊಡಾಜೆ ಜಂಕ್ಷನಿಗೆ ತಲುಪಿದಾಗ ಚಾಲಕನ ನಿಯಂತ್ರಣ ಮೀರಿ ಈ ಅವಘಡ ಸಂಭವಿಸಿದೆ. ಮಧ್ಯರಾತ್ರಿ ಸಮಯವಾಗಿದ್ದರಿಂದ ಭಾರೀ ಅವಘಡ ತಪ್ಪಿ ಹೋಗಿದೆ. ಕೊಡಾಜೆ ಜಂಕ್ಷನ್ನಿನ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿ ಮಹಡಿಗೆ ಡಿಕ್ಕಿ ಹೊಡೆದು ಬಳಿಕ ವಾಹನ ಅಲ್ಲೇ ಇದ್ದ ಹೋಟೆಲಿಗೆ ನುಗ್ಗಿದೆ.
ಘಟನೆಯಿಂದ ಗಂಭೀರ ಗಾಯಗೊಂಡ ಲಾರಿ ಚಾಲಕನನ್ನು ಸ್ಥಳೀಯರು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಲಾರಿ ಚಾಲಕನ ವಿವರ ಗೊತ್ತಾಗಿಲ್ಲ. ಶಿರಸಿ ಮೂಲದ ಲಾರಿ ಎಂದು ತಿಳಿದು ಬಂದಿದೆ. ಘಟನೆಯಿಂದ ಎಲ್ಲಾ ಅಂಗಡಿಗಳಿಗೂ ಹಲವು ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
0 comments:
Post a Comment