ಮಂಗಳೂರು, ಮೇ 24, 2022 (ಕರಾವಳಿ ಟೈಮ್ಸ್) : ಅಂಚೆ ವಿಭಾಗದ ಅರ್ಧವಾರ್ಷಿಕ ಪಿಂಚಣಿದಾರರ ಅದಾಲತ್ ಜೂನ್ 6 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಅಂಚೆ ವಿಭಾಗದ ಬಲ್ಮಠದಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. ಅದೇ ದಿನ ಅಪರಾಹ್ನ 3:30 ಗಂಟೆಗೆ ತ್ರೈಮಾಸಿಕ ಅಂಚೆ ಅದಾಲತ್ ಕೂಡ ನಡೆಯಲಿದೆ.
ಅದಾಲತ್ತಿನಲ್ಲಿ ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು. ಹಾಗೆಯೇ ಪಿಂಚಣಿದಾರರ ಅದಾಲತ್ತಿನಲ್ಲಿ ಪಿಂಚಣಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲಾಗುವುದು.
ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಖೇನ “ಪಿಂಚಣಿದಾರರ ಅದಾಲತ್/ ಅಂಚೆ ಅದಾಲತ್” ತಲೆ ಬರಹದಡಿಯಲ್ಲಿ ಮೇ 31ರೊಳಗೆ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ ಮಂಗಳೂರು 575002” ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಾಪ್ ಸಂಖ್ಯೆ 9448291072ಗೂ ಕಳುಹಿಸಬಹುದು.
ಮಂಗಳೂರು ಅಂಚೆ ವಿಭಾಗದ ವ್ಯಾಪ್ತಿಯು ಮಂಗಳೂರು, ಉಳ್ಳಾಲ, ಮೂಲ್ಕಿ ತಾಲೂಕು ಹಾಗೂ ಕಾರ್ಕಳ ತಾಲೂಕಿನ ಬೆಳ್ಮಣ್ಣು ಅಂಚೆ ಕಛೇರಿ ಮತ್ತು ಮುಂಡ್ಕೂರು ಅಂಚೆ ಕಛೇರಿಯನ್ನು ಒಳಗೊಂಡಿರುತ್ತದೆ. ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸುವಂತೆ ಮಂಗಳೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment