ಬಂಟ್ವಾಳ, ಮೇ 28, 2022 (ಕರಾವಳಿ ಟೈಮ್ಸ್) : ತರಕಾರಿ ಮತ್ತು ಹೂವುಗಳ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲು ನಲ್ಕೆಮಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಬಿ ಸಿ ರೋಡು-ಕೈಕಂಬದ ಪೆÇ್ರ ಗೋವರ್ಧನ್ ರಾವ್ ಅವರ ಸೂರ್ಯವಂಶ ಕಟ್ಟಡದ ನಾಲ್ಕನೇ ಮಹಡಿಯ ಟೆರೇಸ್ ಮೇಲ್ಭಾಗದಲ್ಲಿ ಬೆಳೆಯಲಾಗಿರುವ ಕೃಷಿ ತೋಟಕ್ಕೆ ಶನಿವಾರ ಭೇಟಿ ನೀಡಿದರು.
ಸಾವಯವ ಗೊಬ್ಬರ ತಯಾರಿಸುವ ವಿಧಾನ, ಗಿಡಗಳ ಪೆÇೀಷಣೆ, ವಿವಿಧ ಬಗೆಯ ತರಕಾರಿ ಗಿಡ ಹಾಗೂ ಹೂವುಗಳ ಬೆಳೆಸುವಿಕೆ, ಟೆರೇಸ್ ಮೇಲೆ ಕೃಷಿ ಮಾಡುವ ವಿಧಾನಗಳ ಬಗ್ಗೆ ಪ್ರೊ ಗೋವರ್ದನ ರಾವ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಾಣಿಜ್ಯ ಸಂಕಿರ್ಣದ 4ನೇ ಮಹಡಿಯಲ್ಲಿ ಸುಮಾರು ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಬೆಳೆಸಿದ ವಿವಿಧ ಬಗೆಯ ತರಕಾರಿ ಗಿಡಗಳಾದ ಟೊಮ್ಯಾಟೋ, ಹೀರೇಕಾಯಿ, ಅಲಸಂಡೆ, ಅರಿವೆ, ಗೆಣಸು, ಬದನೆ, ಚೆಂಡು ಹೂ, ಗುಲಾಬಿ, ಸೀತಾಫಲ, ನೆಲ್ಲಿಕಾಯಿ, ಲಿಂಬೆ, ಜಂಬು ನೇರಳೆ, ಪೇರಳೆ, ಬುಗರಿ ಹಣ್ಣು ಹೀಗೆ ಹಲವಾರು ಗಿಡಗಳನ್ನು ಮಕ್ಕಳು ವೀಕ್ಷಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರಾದ ರೇಝಾ ರಾವ್ ಹಾಗೂ ಶಶಿಕಲಾ ಉಪಸ್ಥಿತರಿದ್ದರು.
0 comments:
Post a Comment