ಬಂಟ್ವಾಳ, ಮೇ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ದರ್ಗಾ ಶರೀಫ್ ಇದರ 42ನೇ ವರ್ಷದ ಉದಯಾಸ್ತಮಾನ ಉರೂಸ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ಮೇ 11 ರಿಂದ 15ರವರೆಗೆ ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಲಿದೆ.
ಮೇ 11 ರಂದು ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಸೀದಿ ಅಧ್ಯಕ್ಷ ಎಸ್ ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಖತೀಬ್ ಕೆ ಪಿ ಮುಹಮ್ಮದ್ ಹಸ್ವೀಫ್ ದಾರಿಮಿ ಕಾಜಿನಡ್ಕ ಉಪನ್ಯಾಸಗೈಯುವರು.
ಮೇ 12 ರಂದು ಯು ಕೆ ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್-ಪುತ್ತೂರು, ಕಾಸರಗೋಡು, ಮೇ 13 ರಂದು ಫರಂಗಿಪೇಟೆ ಖತೀಬ್ ಕೆ ವಿ ಅಬ್ಬಾಸ್ ದಾರಿಮಿ ಉಪನ್ಯಾಸಗೈಯುವರು.
ಮೇ 14 ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯಿದ್ ಫಕ್ರುದ್ದೀನ್ ಹಸನಿ ಅಲ್-ಖಾದಿರಿ ದಾರಿಮಿ ತಂಙಳ್ ತಾನೂರು-ಕೇರಳ ಅವರು ದುವಾಶಿರ್ವಚನ ಹಾಗೂ ಮುಖ್ಯ ಭಾಷಣಗೈಯಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ವಕ್ಫ್ ಬೋರ್ಡ್ ಚೆಯರ್‍ಮೆನ್ ಶಾಫಿ ಸಅದಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮೊದಲಾದವರು ಭಾಗವಹಿಸಲಿದ್ದಾರೆ. ಮಸೀದಿ ಗೌರವಾಧ್ಯಕ್ಷ ಹಾಜಿ ಮುಹಮ್ಮದ್ ನೀಮಾ, ಉಪಾಧ್ಯಕ್ಷರುಗಳಾದ ಪಿ ಬಿ ಹಾಮದ್ ಹಾಜಿ, ಉಮ್ಮರ್ ಫಾರೂಕ್ ಎಬಿಸಿ, ಮದ್ರಸ ಮುಖ್ಯೋಪಾಧ್ಯಾಯ ರಶೀದ್ ಹನೀಫಿ, ಅಧ್ಯಾಪಕರುಗಳಾದ ಉಸ್ಮಾನ್ ಮುಸ್ಲಿಯಾರ್, ಮುಹಮ್ಮದ್ ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿರುವರು.
ಮೇ 15 ರಂದು ಸುಬ್‍ಹಿ ನಮಾಝ್ ಬಳಿಕ ಎ ಎ ಇಬ್ರಾಹಿಂ ಮುಸ್ಲಿಯಾರ್ ನೇತೃತ್ವದಲ್ಲಿ ಖತಮುಲ್ ಕುರ್‍ಆನ್, ಲುಹ್‍ರ್ ನಮಾಝ್ ಬಳಿಕ ಕುಕ್ಕಾಜೆ ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಬಳಿಕ ಅನ್ನದಾನ ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment