ಬಂಟ್ವಾಳ, ಮೇ 03, 2022 (ಕರಾವಳಿ ಟೈಮ್ಸ್) : ಆತ್ಮ ಸಂಕಲ್ಪದೊಂದಿಗೆ ಸತ್ಕರ್ಮ ಕೈಗೊಳ್ಳುವುದನ್ನು ನಿತ್ಯ ವರ್ದಿಸಿಕೊಳ್ಳಿ ಎಂದು ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಖತೀಬ್ ಅಬ್ದುಲ್ ರಶೀದ್ ಯಮಾನಿ ತಾಕೀತು ಮಾಡಿದರು.
ಮಂಗಳವಾರ ನಡೆದ ಈದುಲ್ ಫಿತ್ರ್ ನಮಾಝ್ ಹಾಗೂ ಖುತುಬಾಕ್ಕೆ ನೇತೃತ್ವ ವಹಿಸಿ ಮಾತನಾಡಿದ ಅವರು ಲೋಕಾವಸಾನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸೃಷ್ಟಿಕರ್ತನ ಪರೀಕ್ಷೆಗಳು ಕಠಿಣ-ಕಠೋರವಾಗುತ್ತಿದ್ದು ಭಗವಂತನೆಡೆಗೆ ಮರಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ದಾನ-ಧರ್ಮ ಸಹಿತ ಸತ್ಕರ್ಮಗಳನ್ನು ಮನಸ್ಸಂತೋಷ ಹಾಗೂ ದೇವಸಂಪ್ರೀತಿ ಬಯಸಿ ನಿರಂತರವಾಗಿಸಿ ಎಂದು ಕರೆ ನೀಡಿದರು.
ಈ ಸಂದರ್ಭ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಮಸೀದಿ ಮುಅಝಿನ್ ಇಸ್ಮಾಯಿಲ್ ಯಮಾನಿ, ಮಸೀದಿ ಅಧ್ಯಕ್ಷ ಎಸ್ ಮುಹಮ್ಮದ್, ಗೌರವಾಧ್ಯಕ್ಷ ಹಾಜಿ ಮುಹಮ್ಮದ್ ನೀಮಾ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್, ಉಪಾಧ್ಯಕ್ಷರಾದ ಹಾಮದ್ ಹಾಜಿ ಪಾಣೆಮಂಗಳೂರು, ಉಮ್ಮರುಲ್ ಫಾರೂಕ್, ಪ್ರಮುಖರಾದ ಅಬ್ದುಲ್ ಹಮೀದ್, ಮುಹಮ್ಮದ್ ಇರ್ಶಾದ್ ಗುಡ್ಡೆಅಂಗಡಿ, ಹನೀಫ್ ಬೊಗೋಡಿ, ಹನೀಫ್ ಸಫಾ, ಮಜೀದ್ ಬೋಗೋಡಿ, ರಫೀಕ್ ಕೊಚ್ಚಿ, ಯಾಕೂಬ್ ಗುಡ್ಡೆಅಂಗಡಿ, ಸಾದಿಕ್ ಗುಡ್ಡೆಅಂಗಡಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment