ರಂಝಾನಿನಲ್ಲಿ ಕಾಪಾಡಿಕೊಂಡು ಬಂದ ಪಾವಿತ್ರ್ಯತೆ ನಿರಂತರವಾಗಿರಲಿ : ಬಿ ಎಚ್ ಉಸ್ತಾದ್  - Karavali Times ರಂಝಾನಿನಲ್ಲಿ ಕಾಪಾಡಿಕೊಂಡು ಬಂದ ಪಾವಿತ್ರ್ಯತೆ ನಿರಂತರವಾಗಿರಲಿ : ಬಿ ಎಚ್ ಉಸ್ತಾದ್  - Karavali Times

728x90

3 May 2022

ರಂಝಾನಿನಲ್ಲಿ ಕಾಪಾಡಿಕೊಂಡು ಬಂದ ಪಾವಿತ್ರ್ಯತೆ ನಿರಂತರವಾಗಿರಲಿ : ಬಿ ಎಚ್ ಉಸ್ತಾದ್ 

 ಬಂಟ್ವಾಳ, ಮೇ 03, 2022 (ಕರಾವಳಿ ಟೈಮ್ಸ್) : ಪವಿತ್ರ ರಂಝಾನಿನಲ್ಲಿ ಕಾಪಾಡಿಕೊಂಡು ಬಂದ ಪಾವಿತ್ರ್ಯತೆಯನ್ನು ವರ್ಷಪೂರ್ತಿ ಕಾಪಾಡಿಕೊಂಡು ಬರುವ ಮೂಲಕ ಜೀವನ ಧನ್ಯವಾಗಿಸಿಕೊಳ್ಳಿ ಎಂದು ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಕರೆ ನೀಡಿದರು. 

 ಈದುಲ್‌ ಫಿತ್ರ್ ಹಬ್ಬದ ಪ್ರಯುಕ್ತ ಮಂಗಳವಾರ ಮಸೀದಿಯಲ್ಲಿ ನಡೆದ ಈದ್ ನಮಾಝ್ ಹಾಗೂ ಖುತುಬಾಕ್ಕೆ ನೇತೃತ್ವ ನೀಡಿ ಮಾತನಾಡಿದ ಅವರು ಮಾನವ ಜೀವನದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ, ಸಹಕಾರ-ಸಹಾಯ ಮನೋಭಾವ ಪ್ರದರ್ಶಿಸುವ ಮೂಲಕ ಕ್ಷಣಿಕ ಜೀವನದ ಉದ್ದೇಶ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು. 

 ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್ ಸಹಿತ ಜಮಾಅತರು, ಸಾರ್ವಜನಿಕರು ಭಾಗವಹಿಸಿದ್ದರು. ಈದ್ ನಮಾಝ್ ಹಾಗೂ ಖುತುಬಾ ಬಳಿಕ ಮುಸ್ಲಿಂ ಬಾಂಧವರು ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.

  • Blogger Comments
  • Facebook Comments

0 comments:

Post a Comment

Item Reviewed: ರಂಝಾನಿನಲ್ಲಿ ಕಾಪಾಡಿಕೊಂಡು ಬಂದ ಪಾವಿತ್ರ್ಯತೆ ನಿರಂತರವಾಗಿರಲಿ : ಬಿ ಎಚ್ ಉಸ್ತಾದ್  Rating: 5 Reviewed By: karavali Times
Scroll to Top