ಮಂಗಳೂರು, ಮೇ 02, 2022 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಸಹಿತ ರಾಜ್ಯಾದ್ಯಂತ ಭಾನುವಾರ ರಾತ್ರಿ ಶವ್ವಾಲ್ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಮೇ 2 ರಂದು ಸೋಮವಾರ ರಂಝಾನ್ ಉಪವಾಸ 30 ದಿನಗಳನ್ನು ಪೂರ್ಣಗೊಳಿಸಿ ಮೇ 3 ರಂದು ಮಂಗಳವಾರ ಈದುಲ್ ಫಿತ್ರ್ ಆಚರಿಸುವಂತೆ ಗೌರವಾನ್ವಿತ ಖಾಝಿಗಳು ತೀರ್ಮಾನಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಮುಸಲ್ಮಾನ ಬಂಧುಗಳು ರಂಝಾನ್ ಉಪವಾಸ ವೃತಾಚರಣೆ ಕೈಗೊಂಡು ಇದೀಗ 30 ಉಪವಾಸ ದಿನಗಳನ್ನು ಪೂರ್ಣಗೊಳಿಸಿ ಮಂಗಳವಾರ ಸಂಭ್ರಮದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲು ಸಿದ್ದತೆ ನಡೆಸಿದ್ದಾರೆ.
ಮುಸ್ಲಿಮರ ಈದುಲ್ ಫಿತ್ರ್ ಹಬ್ಬದ ಹಿನ್ನಲೆಯಲ್ಲಿ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದು, ಈದುಲ್ ಫಿತ್ರ್ ಹಬ್ಬವನ್ನು ನಾಡಿನಲ್ಲಿ ಶಾಂತಿ-ಸೌಹಾರ್ದತೆ, ಸಹೋದರತೆ, ಭಾತೃತ್ವ ನೆಲೆಸಲು ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.
ರಾಜ್ಯ ವಿಧಾನಸಭೆ ಪ್ರತಿಪಕ್ಷ ಉಪನಾಯಕ, ಮಂಗಳೂರು ಶಾಸಕ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಸೂಫಿ ಸಂತ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮೈಸೂರು, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಸುಲೈಮಾನ್ ನೆಹರುನಗರ, ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಹನೀಫ್ ಹಾಸ್ಕೋ, ಉದ್ಯಮಿಗಳಾದ ಹಾಜಿ ಮುಹಮ್ಮದ್ ಸಾಗರ್, ಹಾಜಿ ಪಿ ಎಸ್ ಅಬ್ದುಲ್ ಹಮೀದ್, ಹಂಝ ಬಸ್ತಿಕೋಡಿ, ಪಿ ಎಸ್ ಅಬ್ದುಲ್ ಲತೀಫ್, ಇಸ್ಮಾಯಿಲ್ ಬಾವಾಜಿ, ಪಿ ಎಸ್ ಮೊಹಮ್ಮದ್ ಇಕ್ಬಾಲ್ ಜೆಟಿಟಿ ಮೊದಲಾದವರು ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ.
0 comments:
Post a Comment