ಬಂಟ್ವಾಳ, ಮೇ 03, 2022 (ಕರಾವಳಿ ಟೈಮ್ಸ್) : ಬಿ ಸಿ ರೋಡು ಕೃಷ್ಣ ಹರಿಟೇಜ್ ಕಟ್ಟಡದಲ್ಲಿ ಕಿಡ್ಸ್ ಕೇರ್ ಸೆಂಟರಿನ ಕ್ಲಿನಿಕ್ ಹೊಂದಿರುವ ಡಾ ಬಿ ಆಶ್ವಿನ್ ಬಾಳಿಗಾ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಲು ಹೇಳಿ ಬಳಿಕ ಬರೋಬ್ಬರಿ 1.65 ಲಕ್ಷ ರೂಪಾಯಿ ಎಗರಿಸಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.
ವೈದ್ಯರ 9845543452 ಮೊಬೈಲ್ ಸಂಖ್ಯೆಗೆ ಎ 29 ರಂದು ಸಂಜೆ 5.30 ಗಂಟೆ ವೇಳೆಗೆ 9348699702 ಸಂಖ್ಯೆಯ ಮೊಬೈಲಿನಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ ಜಿಯೋ ನಂಬರನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿ ಗೂಗಲ್ ಪ್ಲೇ ಸ್ಟೋರ್ ನಿಂದ QUICK EASY APP ನ್ನು ಡೌನ್ಲೋಡ್ ಮಾಡಿಸಿ ಬಳಿಕ ವೈದ್ಯರ ಮೊಬೈಲ್ ನಲ್ಲಿ MY JIO APP ನಲ್ಲಿ 10 ರೂಪಾಯಿ ರಿಚಾರ್ಜ್ ಮಾಡಲು ತಿಳಿಸಲಾಗಿದೆ.
ವೈದ್ಯರು ಎಚ್ ಡಿ ಎಫ್ ಸಿ ಬ್ಯಾಂಕ್ ಎಸ್ ಬಿ ಖಾತೆ ಸಂಖ್ಯೆ 50100181508300 ರ ಡೆಬಿಟ್ ಕಾರ್ಡ್ ವಿವರಗಳನು MY JIO APPನಲ್ಲಿ ಹಾಕಿ 10 ರೂಪಾಯಿ ರಿಚಾರ್ಜ್ ಮಾಡಿರುತ್ತಾರೆ. ಈ ಸಂದರ್ಭ ವೈದ್ಯರಿಗೆ ತಿಳಿಯದಂತೆ ಖಾತೆಯಿಂದ ಹತ್ತು ಸಾವಿರ ರೂಪಾಯಿಯಂತೆ 3 ಬಾರಿ ಮತ್ತು 45 ಸಾವಿರ ರೂಪಾಯಿ 3 ಬಾರಿ ಸಹಿತ ಒಟ್ಟು 1.65 ಲಕ್ಷ ರೂಪಾಯಿ ಹಣ ಅಪರಿಚಿತನ ಖಾತೆಗೆ ವರ್ಗಾವಣೆಯಾಗಿರುತ್ತದೆ.
ಆಪ್ ಡೌನ್ ಲೋಡ್ ಮಾಡುವಂತೆ ಹೇಳಿ ವಂಚನೆಯಿಂದ ಲಕ್ಷಾಂತರ ರೂಪಾಯಿ ಕಸಿದುಕೊಳ್ಳಲಾಗಿದೆ ಎಂದು ವೈದ್ಯರು ಮೇ 3 ರಂದು ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2022 ಕಲಂ 66(ಸಿ) & (ಡಿ), 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment