ಬೆಂಗಳೂರು, ಮೇ 08, 2022 (ಕರಾವಳಿ ಟೈಮ್ಸ್) : 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಪುರಾವೆಗಳು ಮತ್ತು ಕಾಗದ ಪತ್ರಗಳನ್ನು ಕಾಂಗ್ರೆಸ್ ನಿಯೋಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಭಾನುವಾರ ಸಲ್ಲಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ. ಪಾಟೀಲ್, ಇಂದು ನಮ್ಮ ಸಭಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. 19 ಲಕ್ಷ ಇವಿಎಂ ಯಂತ್ರಗಳು ನಾಪತ್ತೆಯಾಗಿರುವ ಬಗ್ಗೆ ಪುರಾವೆಗಳು ಮತ್ತು ಕಾಗದ ಪತ್ರಗಳನ್ನು ನೀಡಿರುವುದಾಗಿ ತಿಳಿಸಿದರು.
19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಕೇಂದ್ರ ಸರಕಾರ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಇದಕ್ಕೆ ಪೂರಕವಾಗಿ 2,750 ಪುಟಗಳ ಕಾಗದ ಪತ್ರಗಳನ್ನು ಸಲ್ಲಿಸಲಾಗಿದೆ. ಮನೊರಂಜನ್ ಸಂತೋಷ್ ರಾಯ್ ಪಿಎಲ್ ಮಾಡಿದ್ರು. ಅದರ ಮಾಹಿತಿಗಳನ್ನು ಸ್ಪೀಕರಿಗೆ ಅವರಿಗೆ ಸಲ್ಲಿಕೆ ಮಾಡಿದ್ದೇನೆ ಎಂದರು.
0 comments:
Post a Comment