ಧರ್ಮಸ್ಥಳ, ಮೇ 18, 2022 (ಕರಾವಳಿ ಟೈಮ್ಸ್) : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ರಾಜ್ಯ ಸರಕಾರದ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು 33 ಕ್ಷಿಂಟಾಲ್ ಅಕ್ಕಿ, ಸಾಗಾಟಕ್ಕೆ ಬಳಸಿದ ವಾಹನ ಸಹಿತ ಆರೋಪಿ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ನಿವಾಸಿ ವಿಜಯ ಕುಮಾರ್ ಎಂ ಎಂ ಅವರ ಪುತ್ರ ವಿನಯ್ (23) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.
ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಧರ್ಮಸ್ಥಳ ಪಿಎಸ್ಸೈ ಕಷ್ಣಕಾಂತ ಪಾಟೀಲ್ ಸಿಬ್ಬಂದಿಗಳಾದ ಮುಹಮ್ಮದ್ ಅಸ್ಲಂ, ರಾಹುಲ್ ರಾವ್, ಮುತ್ತಪ್ಪ ಗೋಡಿ ಹಾಗೂ ಲಿಂಗಪ್ಪ ಅವರ ಜೊತೆಗೂಡಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಅನ್ನ ಬಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಚಾರ್ಮಾಡಿ ಪೆÇಲೀಸ್ ಚೆಕ್ ಪೆÇೀಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ಉಜಿರೆ ಕಡೆಯಿಂದ ಮೂಡಿಗೆರೆ ಕಡೆಗೆ ಹೋಗುವ ಕೆಎ 19 ಸಿ 5086 ನೋಂದಣಿ ಸಂಖ್ಯೆಯ ಬೋಲೆರೋ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಚಾಲಕನನ್ನು ವಿಚಾರಿಸಿದಾಗ ಅನ್ನಭಾಗ್ಯ ಅಕ್ಕಿ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಪಿಕಪ್ ವಾಹನದಲ್ಲಿದ್ದ 59 ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಲಾಗಿದ್ದ ತಲಾ 50 ಕೆ ಜಿ ಅಕ್ಕಿ ಮತ್ತು 14 ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತಲಾ 25 ಕೆ ಜಿ ತುಂಬಿದ ಅಕ್ಕಿ ಸಹಿತ 49,500/- ರೂಪಾಯಿ ಮೌಲ್ಯದ ಒಟ್ಟು 33 ಕ್ವಿಂಟಾಲ್ ಅಕ್ಕಿಯ ಸಹಿತ 50 ಸಾವಿರ ರೂಪಾಯಿ ಮೌಲ್ಯದ ಬೊಲೆರೋ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡು ಬೆಳ್ತಂಗಡಿ ತಾಲೂಕು ಕಚೇರಿ ಆಹಾರ ನಿರೀಕ್ಷಕ ವಿಶ್ವ ಕೆ ಹಾಗೂ ಸಿಬ್ಬಂದಿ ನಾರಾಯಣ ಕುಲಾಲ್ ಅವರಿಗೆ ಹಸ್ತಾಂತರಿಸಲಾಗಿದೆ.
ಬೆಳ್ತಂಗಡಿ ತಾಲೂಕು ಆಹಾರ ನಿರೀಕ್ಷಕ ವಿಶ್ವ ಕೆ ಅವರು ವಾಹನದಲ್ಲಿ ಇದ್ದ ಅಕ್ಕಿಯನ್ನು ಪರೀಶಿಲಿಸಿದ್ದು, 2022 ರ ಮೇ ತಿಂಗಳ ಬಾಬ್ತು ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲಾಗಿರುವ ಅಕ್ಕಿಗೆ ಹೋಲಿಕೆ ಇರುವುದು ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದು, ಅಕ್ಕಿಯನ್ನು ಅಕ್ರಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಕಂಡು ಬಂದಿರುವುದರಿಂದ ಅಕ್ರವಾಗಿ ಅನ್ನ ಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಚಾಲಕನ ಮೇಲೆ ಹಾಗೂ ಸೊತ್ತುಗಳನ್ನು ಮತ್ತು ವಾಹನವನ್ನು ಠಾಣೆಗೆ ಹಾಜರುಪಡಿಸಿ ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40-2022 ಕಲಂ 3 ಮತ್ತು 7 ಅವಶ್ಯಕ ವಸ್ತುಗಳ ಕಾಯ್ದೆ1955 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment