ಬೆಂಗಳೂರು, ಮೇ 20, 2022 (ಕರಾವಳಿ ಟೈಮ್ಸ್) : ಸಿಇಟಿ-2022ರ ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳಲ್ಲಿನ ಮಾಹಿತಿಯನ್ನು ಅರ್ಹತೆಗನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳಲು ಮೇ 21 ರ ಬೆಳಿಗ್ಗೆ 11 ಗಂಟೆಯಿಂದ ಮೇ 24 ರ ರಾತ್ರಿ 11.59ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ಆನ್ ಲೈನ್ ಮೂಲಕ ಸಲ್ಲಿಸಿರುವ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ತಿದ್ದುಪಡಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಮುಖ್ಯವಾಗಿ ಪ್ರವರ್ಗ ಮೀಸಲಾತಿ, ವಾರ್ಷಿಕ ಆದಾಯ, ಕನ್ನಡ, ಗ್ರಾಮೀಣ, ವಿಶೇಷ ಕ್ಯಾಟಗರಿ ಇತ್ಯಾದಿಗಳನ್ನು ಅರ್ಜಿಯಲ್ಲಿ ಸರಿಯಾಗಿ ನಮೂದಿಸಲಾಗಿದೆಯೇ ಎಂದು ಪರಿಶೀಲಿಸಲು ಸೂಚಿಸಲಾಗಿದೆ.
ಮಾಹಿತಿ ತಿದ್ದುಪಡಿ ಮಾಡಿಕೊಂಡ ನಂತರ ತಪ್ಪದೆ ಡಿಕ್ಲರೇಶನ್ ಬಟನ್ ಆಯ್ಕೆ ಮಾಡಿ ನಂತರ ಫೈನಲ್ ಸಬ್ಮಿಶನ್ ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರ ಮಾರ್ಪಡಿಸಿ ಅರ್ಜಿಯನ್ನು ಮುದ್ರಿಸಿ ಇಟ್ಟುಕೊಳ್ಳುವುದು. ತಪ್ಪಿದಲ್ಲಿ ಅಭ್ಯರ್ಥಿಗಳು ಅರ್ಜಿಯಲ್ಲಿ ಮೊದಲು ಸಲ್ಲಿಸಿದ ಮಾಹಿತಿಯನ್ನೇ ಮುಂದಿನ ಪ್ರಕ್ರಿಯೆಗಳಿಗೆ ಪರಿಗಣಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
0 comments:
Post a Comment