ಬೆಳ್ತಂಗಡಿ, ಮೇ 22, 2022 (ಕರಾವಳಿ ಟೈಮ್ಸ್) : ತಾಲೂಕಿನ ನಿಟ್ಟಡೆ ಗ್ರಾಮದ ಪೆರ್ಮುಡ ಎಂಬಲ್ಲಿ ಮಾರುತಿ 800 ಕಾರಿನಲ್ಲಿ ಅಕ್ರಮ ದನ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ವೇಣೂರು ಪೊಲೀಸ್ ಠಾಣಾ ಪಿಎಸ್ಐ ಸೌಮ್ಯ ನೇತೃತ್ವದ ಪೊಲೀಸರು ಶನಿವಾರ ರಾತ್ರಿ ಬೇ.ಎಸ್ಸೈ ಸೌಮ್ಯ.ಜೆ ಅವರು ಸಿಬ್ಬಂದಿಯವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ ಸುಮಾರು 7.05 ಗಂಟೆಗೆ ಅಳದಂಗಡಿಯಿಂದ ನೀಲಿ ಬಣ್ಣದ ಮಾರುತಿ 800 ಕಾರಿನಲ್ಲಿ ಇಬ್ಬರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವ ಖಚಿತ ಮಾಹಿತಿ ದೊರೆತ ಮೇರೆಗೆ ರಾತ್ರಿ ಸುಮಾರು 7:30 ಗಂಟೆಗೆ ಬೆಳ್ತಂಗಡಿ ತಾಲೂಕು ನಿಟ್ಟಡೆ ಗ್ರಾಮದ ಪೆರ್ಮುಡ ಎಂಬಲ್ಲಿ ಸಿಬ್ಬಂದಿಯವರೊಂದಿಗೆ ಕಾಯುತ್ತಿರುವ ಸಮಯ ಅಳದಂಗಡಿ ಕಡೆಯಿಂದ ಒಂದು ಮಾರುತಿ 800 ಕಾರು ವೇಗವಾಗಿ ಬರುತ್ತಿದ್ದು ಅದನ್ನು ನೋಡಿದ ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ವಾಹನವು ನಿಲ್ಲಿಸದೇ ಮುಂದಕ್ಕೆ ಹೋಗಿದ್ದು, ಈ ಸಂದರ್ಭ ಪೊಲೀಸರು ತಮ್ಮ ಇಲಾಖಾ ಜೀಪಿನಲ್ಲಿ ಬೆನ್ನಟ್ಟಿ ಸುಮಾರು ಅರ್ಧ ಕಿ ಮೀ ದೂರ ಹೋದಾಗ ಆರೋಪಿತರು ಮಾರುತಿ 800 ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪೊಲೀಸರು ಜೀಪಿನಿಂದ ಇಳಿಯುತ್ತಿದ್ದಂತೆ ಕಾರು ಚಾಲಕ ಹಾಗೂ ಕಾರಿನ ಮುಂದಿನ ಎಡಬದಿಯಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ ಸಮೀಪದ ಗುಡ್ಡೆಗೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.
ತಪ್ಪಿಸಿಕೊಂಡ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಉಳ್ತೂರು ನಿವಾಸಿ ಯಾಸಿರ್ ಹಾಗೂ ಹುಣ್ಸೆಪಲ್ಕೆ ನಿವಾಸಿ ಇಬ್ರಾಹಿಂ ಖಲೀಲ್ ಎಂದು ಹೆಸರಿಸಲಾಗಿದೆ.
ಆರೋಪಿಗಳು ನಿಲ್ಲಿಸಿ ಹೋಗಿದ್ದ ಮಾರುತಿ 800 ಕಾರಿನೊಳಗೆ ಪೊಲೀಸರು ಪರಿಶೀಲಿಸಿದಾಗ ಅದರೊಳಗೆ ಒಂದು ಕಂದು ಬಣ್ಣದ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ 800 ಕಾರಿನ ಮೌಲ್ಯ ಸುಮಾರು 45 ಸಾವಿರ ರೂಪಾಯಿ ಹಾಗೂ ದನದ ಮೌಲ್ಯ 2 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2022 ಕಲಂ 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment