ಬಂಟ್ವಾಳ, ಮೇ 23, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಪ್ರತ್ಯೇಕವಾಗಿ ದಾಳಿ ನಡೆಸಿದ ಪೊಲೀಸರು ಗಾಂಜಾ ಪ್ರಕರಣ ಬೇಧಿಸಿ ಒಟ್ಟು 5 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪಿಎಸ್ಸೈ ಹರೀಶ್ ಎಂ ಆರ್ ಅವರು ಖಚಿತ ಮಾಹಿತಿ ಮೇರೆಗೆ ಸೋಮವಾರ ಸಜಿಪನಡು ಗ್ರಾಮದ ಕೋಟೆಕಣಿ ಜಂಕ್ಷನ್ನಿನಲ್ಲಿ ಮಾದಕ ವಸ್ತು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ಆರೋಪಿಗಳಾದ ಮುಹಮ್ಮದ್ ಶಮೀರ್ ಹಾಗೂ ಮುಹಮ್ಮದ್ ಅಪ್ಸಾನ್ ಅವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2022 ಕಲಂ 27(ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಅಮ್ಟಾಡಿ ಗ್ರಾಮದ ಲೊರೆಟ್ಟೊಪದವಿನಲ್ಲಿ ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಠಾಣಾ ಪಿಎಸೈ ಅವಿನಾಶ ಎಚ್ ಗೌಡ ನೇತೃತ್ವದ ಪೊಲೀಸರು ಆರೋಪಿ ಪಂಜಿಕಲ್ಲು ಗ್ರಾಮದ ಪೂವನನಬೆಟ್ಟು ನಿವಾಸಿ ದಿವಂಗತ ಅಮ್ಮಿ ಪೂಜಾರಿ ಅವರ ಪುತ್ರ ರಾಜೇಶ್ ಪೂಜಾರಿ (43) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಯಿಂದ ಪರವಾನಿಗೆ ಇಲ್ಲದೆ ಅಕ್ರಮ ಮಾರಾಟ ಮಾಡುತ್ತಿದ್ದ ಮದ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಾಣೆಮಂಗಳೂರು ಸಮೀಪದ ನಂದಾವರಲ್ಲೂ ಸೋಮವಾರ ದಾಳಿ ನಡೆಸಿದ ನಗರ ಠಾಣಾ ಪೊಲೀಸರು ಅಮಲು ಪದಾರ್ಥ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ಆರೋಪಿಗಳಾದ ಸಜಿಪಮುನ್ನೂರು ಗ್ರಾಮದ ನಂದಾವರ ನಿವಾಸಿಗಳಾದ ಖಾದರ್ ಅವರ ಪುತ್ರ ಮೊಹಮ್ಮದ್ ಇಂತಿಯಾಝ್ (37) ಹಾಗೂ ಮೊಹಮ್ಮದ್ ಅವರ ಪುತ್ರ ಉಬೈದ್ (34) ಅವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 52 ಹಾಗೂ 53/2022 ಕಲಂ 27 (ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment