ಬೆಳ್ತಂಗಡಿ, ಎಪ್ರಿಲ್ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ನಡ ಗ್ರಾಮದ ಮಂಜದಪಲ್ಕೆಯ ಮನೆಯಲ್ಲಿ ಆರೋಪಿ ಬಶೀರ್ ಎಂಬಾತ ಇನ್ನೋರ್ವ ಆರೋಪಿ ಅನ್ವರ್ ಎಂಬಾತನೊಂದಿಗೆ ಸೇರಿ ಅಕ್ರಮ ದನದ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಪಿಎಸ್ಸೈ ನಂದಕುಮಾರ್ ನೇತೃತ್ವದ ಪೊಲೀಸರು ಬುಧವಾರ ರಾತ್ರಿ ಸುಮಾರು 10.30ರ ವೇಳೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ದನ ಹಾಗೂ ಮಾಂಸಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ಆರೋಪಿ ಬಶೀರ್ ತನ್ನ ಮನೆಯ ಹಿಂದಿನ ಬಚ್ಚಲು ಕೋಣೆಯಲ್ಲಿ ಅಕ್ರಮ ಕಸಾಯಿ ಮಾಡುತ್ತಿರುವುದು ಕಂಡು ಬಂದಿದೆ. ಮಾಂಸಕ್ಕಾಗಿ ಕುತ್ತಿಗೆ ಕೊಯಿದು ಕೊಂದು ಹಾಕಿದ ಹೋರಿ, ವಧೆ ಮಾಡಲು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹೋರಿ ಕರು, ವಧೆ ಮಾಡಲು ಉಪಯೋಗಿಸಿದ ಮಂಡೆ ಕತ್ತಿ, ಚಾಕು, ಆಟೋ ರಿಕ್ಷಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2022 ಕಲಂ 4, 5, 7, 8, 12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ ನಿಯಮ 2020ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment