ಬಂಟ್ವಾಳ, ಎಪ್ರಿಲ್ 14, 2022 (ಕರಾವಳಿ ಟೈಮ್ಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ ರಾಮಾನಾಥ ರೈ, ಸರ್ವರಿಗೂ ಕತ್ತಲೆಯಿಂದ ಬೆಳಕಿನ ಕಡೆಗೆ ದಾರಿ ದೀಪವಾಗಿ ಸಂವಿಧಾನ ಗ್ರಂಥ ರಚಿಸಿ ಬದುಕು ಕೊಟ್ಟ ಮಾನವತಾವಾದಿ ಹಾಗೂ ಒಬ್ಬ ದಾರ್ಶನಿಕರಾಗಿದ್ದಾರೆ ಡಾ ಬಿ ಆರ್ ಅಂಬೇಡ್ಕರ್ ಎಂದು ಗುಣಗಾನ ಮಾಡಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಸುದರ್ಶನ್ ಜೈನ್, ಸುಧಾಕರ ಶೆಣೈ, ರಿಯಾಝ್ ಹುಸೈನ್ ಬಂಟ್ವಾಳ, ದೇವಪ್ಪ ಕರ್ಪೆ, ಮನೋಹರ್ ಕುಲಾಲ್, ವೆಂಕಪ್ಪ ಪೂಜಾರಿ, ಗಂಗಾಧರ ಪೂಜಾರಿ, ಅಮ್ಮು ಅರ್ಬಿಗುಡ್ಡೆ, ಅದಂ ಕುಂಞÂ, ಶಿವಾನಂದ ರೈ, ದಿನೇಶ್ ಶೆಟ್ಟಿಗಾರ್, ಜಯಕರ ಶೆಟ್ಟಿ, ದಿನೇಶ್ ಸುಂದರ್ ಶಾಂತಿ, ಮಹಾಬಲ ಬಂಗೇರ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment