ಅರಣ್ಯಾಧಿಕಾರಿಗಳಿಂದ ಜಾತಿ ನಿಂದನೆಗೈದು ಹಣಕ್ಕಾಗಿ ಬೇಡಿಕೆ ಆರೋಪ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಅರಣ್ಯಾಧಿಕಾರಿಗಳಿಂದ ಜಾತಿ ನಿಂದನೆಗೈದು ಹಣಕ್ಕಾಗಿ ಬೇಡಿಕೆ ಆರೋಪ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

9 April 2022

ಅರಣ್ಯಾಧಿಕಾರಿಗಳಿಂದ ಜಾತಿ ನಿಂದನೆಗೈದು ಹಣಕ್ಕಾಗಿ ಬೇಡಿಕೆ ಆರೋಪ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ, ಎಪ್ರಿಲ್ 09, 2022 (ಕರಾವಳಿ ಟೈಮ್ಸ್) : ಕೃಷಿ ಜಮೀನಿನಲ್ಲಿದ್ದ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಕಜೆ ನಿವಾಸಿ ಐತ ಕೊರಗ (55) ಅವರೊಂದಿಗೆ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇರಿಸಿ ನೀಡಲು ನಿರಾಕರಿಸಿದ ಕಾರಣಕ್ಕೆ ಜಾತಿ ನಿಂದನೆಗೈದ ಅರಣ್ಯಾಧಿಕಾರಿಗಳು ಸುಳ್ಳು ವರದಿ ತಯಾರಿಸಿ ಪ್ರಕರಣ ದಾಖಲಿಸಿದ ವಿರುದ್ದ ಅರಣ್ಯಾಧಿಕಾರಿಗಳಾದ ಪ್ರಕಾಶ್ ನೆಟಾಲ್ಕರ್, ಕ್ಲಿಫರ್ಡ್ ಲೋಬೋ ಹಾಗೂ ಸಂಧ್ಯಾ ಅವರ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಐತ ಕೊರಗ ಅವರು ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿ ಸರ್ವೆ ನಂಬ್ರ 238/1ಪಿ3 ರಲ್ಲಿ 2.18 ಎಕ್ರೆ ಕೃಷಿ ಭೂಮಿ ಹೊಂದಿದ್ದು, ಸುಮಾರು 40 ವರ್ಷಗಳಿಂದ ಸ್ವಾದೀನದಲ್ಲಿರುವುದಾಗಿದೆ. ಅವರ  ಸ್ಥಿರಾಸ್ಥಿಯಲ್ಲಿ ಹೆಬ್ಬಲಸು, ಬಣ್ಪು, ರಾಮಪತ್ರೆ ಹಾಗೂ ಮಾವು ಮರಗಳಿದ್ದು, ಗೇರು ಕೃಷಿ ಕೂಡ ಇರುತ್ತದೆ. ಗೇರು ಕೃಷಿ ಲಾಭ ಇಲ್ಲದೆ ಇದ್ದುದರಿಂದ ಅಡಿಕೆ ಕೃಷಿ ಮಾಡುವರೇ ಮರಗಳನ್ನು ಕಡಿದಿರುತ್ತಾರೆ. ಕಡಿದ ಮರಗಳನ್ನು 2021 ರ ಡಿಸೆಂಬರ್ 9 ರಂದು ಕೃಷಿ ಜಮೀನಿನಿಂದ ವಾಹನದಲ್ಲಿ ಹೊರಗಡೆ ಸಾಗಾಟ ಮಾಡಿ ಸ್ಥಳದಲ್ಲಿ ರಾಶಿ ಹಾಕುತ್ತಿದ್ದ ವೇಳೆಗೆ ಅರಣ್ಯ ಇಲಾಖೆಯ ಆಧಿಕಾರಿಗಳಾದ ಪ್ರಕಾಶ್ ನೆಟಾಲ್ಕರ್, ಕ್ಲಿಫರ್ಡ್ ಲೋಬೋ, ಶ್ರೀಮತಿ ಸಂಧ್ಯಾ ಎಂಬವರು ಸ್ಥಳಕ್ಕೆ ಬಂದು ಕಡಿದು ಹಾಕಿದ ಮರ ಹಾಗೂ ವಾಹನವನ್ನು ಜಪ್ತಿ ಮಾಡಿರುತ್ತಾರೆ. ಐತ ಅವರ ಜಮೀನಿನಿಂದ ಕಡಿದ ಮರಗಳನ್ನು ಅರಣ್ಯ ಇಲಾಖಾ ಅಧಿಕಾರಿಯವರು ಕಾನೂನು ರೀತಿಯ ವಶಪಡಿಸಿಕೊಂಡಿರುತ್ತಾರೆ ಹಾಗೂ ಪ್ರಕರಣ ದಾಖಲಿಸಿರುತ್ತಾರೆ. 

ಆದರೆ ಮರುದಿನ ಅರಣ್ಯಾಧಿಕಾರಿ ಶ್ರೀಮತಿ ಸಂಧ್ಯಾ ಅವರು ಯಾವುದೇ ನೋಟೀಸು ನೀಡದೇ ಐತ ಅವರ ಸ್ಥಿರಾಸ್ಥಿಗೆ ಅಕ್ರಮ ಪ್ರವೇಶ ಮಾಡಿ ಅವರನ್ನು ಹಾಗೂ ಅವರ ತಾಯಿಯನ್ನು ಬರಹೇಳಿ ವಿಚಾರಿಸಿ ಮರಗಳನ್ನು ತೋರಿಸಿದಂತೆ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿರುತ್ತಾರೆ. ಸದ್ರಿ ಮರಗಳನ್ನು ಡಿಪೆÇ್ಪೀಗೆ ಸಾಗಿಸಿರುತ್ತಾರೆ. ಅಲ್ಲದೆ ಶ್ರೀಮತಿ ಸಂಧ್ಯಾರವರು ಮತ್ತಷ್ಟು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸಿರುತ್ತಾರೆ. ಅಲ್ಲದೆ ಶ್ರೀಮತಿ ಸಂದ್ಯಾರವರು ಐತ ಅವರಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಅವರಿಗೆ ಹಣ ಕೊಡಬೇಕಾಗಿದೆ. 5 ಲಕ್ಷ ರೂಪಾಯಿ ನೀಡುವಂತೆ ತಿಳಿಸಿರುತ್ತಾರೆ. ಆದರೆ ಐತ ಅವರು ಹಣ ನೀಡಲು ನಿರಾಕರಿಸಿದ ವೇಳೆ ಕೋಪಗೊಂಡ ಶ್ರೀಮತಿ ಸಂಧ್ಯಾರವರು ಅವರನ್ನುದ್ದೇಶಿಸಿ ಕೊರಗ ಜಾತಿಗೆ ಸೇರಿದ ನಿಮ್ಮ ಬುದ್ದಿಯೇ ಇಷ್ಟು, ನಿಮಗೆ ಹೇಗೆ ಬುದ್ದಿ ಕಲಿಸಬೇಕೆಂದು ನನಗೆ ಗೊತ್ತಿದೆ ಎಂಬುದಾಗಿ ಬೆದರಿಸಿ ಜಾತಿ ನಿಂದನೆ ಮಾಡಿರುತ್ತಾರೆ. ಅಲ್ಲದೇ ಪ್ರಕಾಶ್ ನಟಾಲ್ಕರ್, ಕ್ಲಿಫರ್ಡ್ ಲೋಬೋ, ಮತ್ತು ಶ್ರೀಮತಿ ಸಂಧ್ಯಾ ರವರು ಸೇರಿಕೊಂಡು  ಸಮಾನ ಉದ್ದೇಶದಿಂದ ಐತ ಅವರಿಗೆ  ಯಾವುದೇ ನೋಟೀಸನ್ನು ನೀಡದೇ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಮಾಹಿತಿಯನ್ನೂ ನೀಡದೆ ತೊಂದರೆಯನ್ನು ಉಂಟು ಮಾಡುವ ಉದ್ದೇಶದಿಂದ ಕೊರಗ ಜಾತಿಗೆ ಸೇರಿದ ಐತ ಅವರನ್ನು ದಮನಿಸುವ ಉದ್ದೇಶದಿಂದ ಸುಳ್ಳು ವರದಿಯನ್ನು ತಯಾರಿಸಿ ಸರಕಾರಿ ಸ್ಥಳದಿಂದ ಹಲವು ಮರಗಳನ್ನು ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಡಿದು ಸಾಗಾಟ ಮಾಡಿರುತ್ತಾರೆ ಎಂದು ಸುಳ್ಳು ವರದಿಯನ್ನು ತಯಾರಿಸಿ ಪ್ರಕರಣ ದಾಖಲಿಸಿರುತ್ತಾರೆ ಎಂದು ಐತ ಅವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2022 ಕಲಂ 447, 506 ಐಪಿಸಿ   ಮತ್ತು ಕಲಂ 3(1) ಎಸ್.ಸಿ. ಮತ್ತು ಎಸ್.ಟಿ ಕಾಯ್ದೆ 2014 ರಂತೆ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅರಣ್ಯಾಧಿಕಾರಿಗಳಿಂದ ಜಾತಿ ನಿಂದನೆಗೈದು ಹಣಕ್ಕಾಗಿ ಬೇಡಿಕೆ ಆರೋಪ : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top