ಮಂಗಳೂರು, ಎಪ್ರಿಲ್ 06, 2022 (ಕರಾವಳಿ ಟೈಮ್ಸ್) : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಯೋಜನೆಯಾದ ರಂಗ ಮಂದಿರ ಕಾಯ್ದಿರಿಸುವಿಕೆ ಹಾಗೂ ಕಲಾವಿದರ ದತ್ತಾಂಶ ಸಂಗ್ರಹವನ್ನು ಆನ್‍ಲೈನ್ ಮೂಲಕ ನೊಂದಾಯಿಸುವ ಯೋಜನೆಯನ್ನು ರಾಜ್ಯ ಕನ್ನಡ ಮತು ಸಂಸ್ಕøತಿ ಇಲಾಖೆ ಹಾಗೂ ಇಂಧನ ಸಚಿವರು ಲೋಕಾರ್ಪಣೆಗೊಳಿಸಿದ್ದಾರೆ.
ರಂಗ ಮಂದಿರಗಳಾದ ರವೀಂದ್ರ ಕಲಾಕ್ಷೇತ್ರ, ನಯನ, ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾ ಕ್ಷೇತ್ರ ಆರ್ಟ್ ಗ್ಯಾಲರಿ ಮತ್ತು ಕಲಾ ಗ್ರಾಮ ಬಯಲು ರಂಗಮಂದಿರ ಬೆಂಗಳೂರು ಇಲ್ಲಿ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಿಗಾಗಿ ಕಲಾವಿದರು/ ಸಂಘ-ಸಂಸ್ಥೆಯವರು/ ಸಾರ್ವಜನಿಕರು ಆನ್‍ಲೈನ್ ಜಾಲತಾಣದ www.rangamandira.karnataka.govt.in ಮೂಲಕ ಕಾಯ್ದಿರಿಸುವಂತೆ ಹಾಗೂ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ ತುಳು ಸಾಹಿತಿ/ ಕಲಾವಿದರುಗಳು ಸೇವಾಸಿಂಧು ಪೋರ್ಟಲ್ sevasindhu.karnataka.govt.in ಮೂಲಕ ತಮ್ಮ ಮಾಹಿತಿಯನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ತುಳು ಸಾಹಿತಿ/ ಕಲಾವಿದರುಗಳು ಈ ದತ್ತಾಂಶ ಸಂಗ್ರಹ ಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.
0 comments:
Post a Comment