ಬಂಟ್ವಾಳ, ಎಪ್ರಿಲ್ 13, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ಕೆಲವೆಡೆ ಹಾನಿ ಸಂಭವಿಸಿದೆ.
ಮಂಚಿ ಗ್ರಾಮದ ಕೇಪಳಗುರಿ ನಿವಾಸಿ ಜಯಶ್ರೀ ಬಿನ್ ಮಂಜುನಾಥ ಆಚಾರಿ ಅವರ ಮನೆ ಗೋಡೆ ಹಾಗೂ ಹಂಚು ಹಾನಿಯಾಗಿದ್ದು ಮಳೆಗೆ ಮನೆ ಸಂಪೂರ್ಣ ಕುಸಿಯುವ ಸಂಭವವಿದೆ.
ಮಾಣಿ ಗ್ರಾಮದ ಶಂಭುಗ ಶೀನ ಮೂಲ್ಯ ಬಿನ್ ಗುಡ್ಡ ಮೂಲ್ಯ ಅವರ ವಿದ್ಯುತ್ ಮೀಟರ್ ಗೆ ಸಿಡಿಲು ಬಡಿದು ಹಾನಿಯಾಗಿರುತ್ತದೆ. ಮನೆಗೆ ಹಾನಿ ಸಂಭವಿಸಿಲ್ಲ.
ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಆಯಿಷ ಕೋಂ ಮೊಯಿದು ಕುಂಞಿ ಅವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ ಹಾಗೂ ವಿದ್ಯುತ್ ಸಂಪರ್ಕ ಹಾನಿಯಾಗಿದ್ದು, ಯಾವುದೇ ಜೀವ ಹಾನಿಯಾಗಿಲ್ಲ.
0 comments:
Post a Comment