ಬಂಟ್ವಾಳ, ಎಪ್ರಿಲ್ 06, 2022 (ಕರಾವಳಿ ಟೈಮ್ಸ್) : ಬಂಟ್ವಾಳ ಕುಲಾಲ ಯುವ ವೇದಿಕೆ ಇದರ ಪದಗ್ರಹಣ ಸಮಾರಂಭದ ಪ್ರಯುಕ್ತ ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಬಂಟ್ವಾಳ ಇದರ ಸಹಯೋಗದೊಂದಿಗೆ ಮಂಗಳೂರು-ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರವು ಎಪ್ರಿಲ್ 10 ರಂದು ಭಾನುವಾರ ಬೆಳಿಗ್ಗೆ 10 ರಿಂದ ಬಿ ಸಿ ರೋಡು ಪೆÇಸಳ್ಳಿ ಕುಲಾಲ ಭವನದಲ್ಲಿ ನಡೆಯಲಿದೆ.
ಇದೇ ವೇಳೆ 2022ರ ಸರ್ವಜ್ಞ ಪ್ರಶಸ್ತಿಯನ್ನು ಪಣೋಲಿಬೈಲು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಮೂಲ್ಯ, ಕೃಷಿ ಕ್ಷೇತ್ರದಲ್ಲಿ ಕೊರಗ ಮೂಲ್ಯ ಅಂತರ-ಜಕ್ರಿಬೆಟ್ಟು, ಸಮಾಜ ಸೇವೆಯಲ್ಲಿ ಗಣೇಶ ಕೆದಿಲ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಿ ಆರ್ ಕುಲಾಲ್ ಕಾಮಾಜೆ, ಕ್ರೀಡಾ ಕ್ಷೇತ್ರದಲ್ಲಿ ಶಿವಾನಂದ ಕುಲಾಲ್ ಪಣೋಲಿಬೈಲು, ನಾಟಿ ವೈದ್ಯರಾದ ಗಿರಿಜಾ ನಾಯಿಲ-ಬೋರುಗುಡ್ಡೆ ಅವರಿಗೆ ಪ್ರದಾನ ಮಾಡಲಾಗುವುದು.
11.30ಕ್ಕೆ ಕಲಾರತ್ನ ಸುಧಾಕರ ಸುರತ್ಕಲ್ ಇವರ ನಿರ್ದೇಶನದಲ್ಲಿ ಭಕ್ತ ಕುಂಬಾರ ಭಕ್ತಿ ಪ್ರಧಾನ ಕಿರು ನಾಟಕ, ಮಧ್ಯಾಹ್ನ 2.30ಕ್ಕೆ ಪ್ರಸಿದ್ಧ ರಂಗಭೂಮಿ ಕಲಾವಿದರಿಂದ ಬಲೇ ತೆಲಿಪಾಲೆ ಹಾಸ್ಯ ವೈಭವ ಹಾಗೂ ಸಂಜೆ 5 ಗಂಟೆಗೆ ಕುಂಭೋಧರಿ ಯಕ್ಷ ಕಲಾ ಬಳಗ ಇವರಿಂದ ಮೇದಿನಿ ನಿರ್ಮಾಣ ಮತ್ತು ಮಹಿಷ ಮರ್ಧಿನಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ನಿತೇಶ್ ಕುಲಾಲ್ ಪಲ್ಲಿಕಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment