ಬಂಟ್ವಾಳ, ಎಪ್ರಿಲ್ 03, 2022 (ಕರಾವಳಿ ಟೈಮ್ಸ್) : ತಾಲೂಕು ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಕಲ್ಲಡ್ಕ ಹಾಗೂ ಕಾರ್ಯದರ್ಶಿಯಾಗಿ ಯಶೋಧಾ ಪಾಣೆಮಂಗಳೂರು ಅವರು ಆಯ್ಕೆಯಾಗಿದ್ದಾರೆ.
ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶನಿವಾರ (ಎ. 02) ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಜನಾರ್ದನ್ ಬಂಟ್ವಾಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೌ
ಗೌರವಾಧ್ಯಕ್ಷರಾಗಿ ರಾಘವ ಗೌಡ ಕುಳ, ಉಪಾಧ್ಯಕ್ಷರಾಗಿ ಸಂತೋಷ್ ಪಿಲಾತಬೆಟ್ಟು, ಜೊತೆ ಕಾರ್ಯದರ್ಶಿಗಳಾಗಿ ಯಮುನಾ, ನವೀನ್, ವನಿತಾ ಕಾಡಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್ ಇಡ್ಕಿದು, ಕೋಶಾಧಿಕಾರಿಯಾಗಿ ನಳಿನಿ ಕಾವಳಪಡೂರು, ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ್ ರಾಯಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಷಾ ಇರ್ವತ್ತೂರು, ಮಾರ್ಗದರ್ಶಕರಾಗಿ ಸುಂದರ ಕೆ.ಬಿ. ಅವರನ್ನು ಆರಿಸಲಾಯಿತು.
0 comments:
Post a Comment