ಮಂಗಳೂರು, ಎಪ್ರಿಲ್ 11, 2022 (ಕರಾವಳಿ ಟೈಮ್ಸ್) : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ವಿಲ್ ಅವರನ್ನು ಹಠಾತ್ ಅಗಿ ಅಧ್ಯಕ್ಷಗಿರಿಯಿಂದ ಇತ್ತೀಚೆಗೆ ಗೇಟ್ ಪಾಸ್ ನೀಡಿದ್ದ ರಾಜ್ಯ ಸರಕಾರ ಇದೀಗ ಎಪ್ರಿಲ್ 6 ರಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಪದಾಧಿಕಾರಿಗಳ ನೇಮಕಗೊಳಿಸಿ ಹೊರಡಿಸಿದ್ದ ಆದೇಶಕ್ಕೂ ಎಪ್ರಿಲ್ 8 ರಂದು ತಡೆ ನೀಡಿ ಮರು ಆದೇಶ ಹೊರಡಿಸಿದೆ.
ವಕ್ಫ್ ಸಲಹಾ ಸಮಿತಿ ಪದಾಧಿಕಾರಿಗಳ ನೇಮಕಕ್ಕೆ ತಡೆ ನೀಡಿದಕ್ಕೆ ಯಾವುದೇ ಸಕಾರಣ ನೀಡಿಲ್ಲದೇ ಇದ್ದರೂ ಸ್ಥಳೀಯ ಶಾಸಕರು, ಬಿಜೆಪಿ ಮುಖಂಡರು ಶಿಫಾರಸ್ಸು ಮಾಡಿದ ಪದಾಧಿಕಾರಿಗಳ ಹೆಸರಿಗೆ ರಾಜ್ಯ ವಕ್ಫ್ ಅಧ್ಯಕ್ಷರು ಕತ್ತರಿ ಪ್ರಯೋಗಿಸಿ ತನ್ನದೇ ಶಿಫಾರಸ್ಸಿನ ಮೇರೆಗೆ ಕೆಲ ಪದಾಧಿಕಾರಿಗಳ ಹೆಸರುಗಳನ್ನು ಸೇರಿಸಿ ಆದೇಶ ಹೊರಡಿಸಿದ್ದೇ ಆದೇಶಕ್ಕೆ ಸರಕಾರ ತಡೆ ನೀಡಲು ಕಾರಣ ಎಂದು ಕೆಲ ಬಿಜೆಪಿ ಪ್ರಮುಖರು ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯದ ಹತ್ತು ಜಿಲ್ಲೆಗಳಾದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಚಿಕ್ಕಮಗಳೂರು, ರಾಮನಗರ, ಚಿಕ್ಕೋಡಿ, ತುಮಕೂರು, ಚಿಕ್ಕಬಳ್ಳಾಪುರ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳ ವಕ್ಫ್ ಸಲಹಾ ಸಮಿತಿಯ ಪದಾಧಿಕಾರಿಗಳ ನೇಮಕದ ಆದೇಶವನ್ನು ಸರಕಾರ ತಡೆ ಹಿಡಿದಿದೆ.
0 comments:
Post a Comment