ಬೆಳ್ತಂಗಡಿ, ಎಪ್ರಿಲ್ 09, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಿಲ್ಯ ಗ್ರಾಮದ ಗೋಳಿಕಟ್ಟೆಯಲ್ಲಿ ವಾರಂಟ್ ಆರೋಪಿ ಅಬ್ದುಲ್ ಲತೀಫ್ ಎಂಬಾತನನ್ನು ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣಾ ಎಚ್ ಸಿ ನಾರಾಯಣ ಗೌಡ ಅವರು ತನ್ನ ಸಹೊದ್ಯೋಗಿ ಪಿಸಿ ಲೋಹಿತ್ ಜೊತೆ ಸೇರಿ ಕುಂದಾಪುರ ಎಸಿಜೆ ಮತ್ತು ಜೆಎಂಎಪ್‍ಸಿ ನ್ಯಾಯಾಲಯದ ಸಿಸಿ ನಂಬ್ರ 1799/22 ರ ಪ್ರಕಾರ ಬಂಧಿಸಲು ತೆರಳಿದ್ದ ವೇಳೆ ಆರೋಪಿ ಇತರ ಆರೋಪಿಗಳಾದ ಮೋನು, ಅನೀಸ, ಸಫಿಯಾ, ನೆಬಿಸಾ ಹಾಗೂ ಇತರರ ಜೊತೆ ಸೇರಿ ಪೊಲೀಸರಿಂದ ವಾರಂಟ್ ಪ್ರತಿ ಕಿತ್ತು ಅವಾಚ್ಯ ಶಬ್ದಗಳಿಂದ ಬೈದು ಕಚ್ಚಿ ಗಾಯಗೊಳಿಸಿದ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗೆ ವಾರಂಟ್ ಜ್ಯಾರಿಯ ಬಗ್ಗೆ ಶುಕ್ರವಾರ ಪೊಲೀಸರು ತೆರಳಿದ್ದ ವೇಳೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ವಾರಂಟ್ ಆಸಾಮಿ ಅಬ್ದುಲ್ ಲತೀಪ್ ಎಂಬಾತನು ಪೊಲೀಸರಿಗೆ ಕಾಣ ಸಿಕ್ಕಿದಾಗ ಆತನಲ್ಲಿ “ನಾವು ಶಂಕರನಾರಾಯಣ ಪೆÇಲೀಸ್ ಠಾಣಾ ಪೆÇಲೀಸರು ಎಂದು ಹೇಳಿ ತಮ್ಮ ಐಡಿ ಕಾರ್ಡ್‍ಗಳನ್ನು ತೋರಿಸಿ ನಿಮಗೆ ಮಾನ್ಯ ನ್ಯಾಯಾಲಯದ ವಾರಂಟ್ ಇದೆ ಎಂದು ಹೇಳಿ ವಾರಂಟ್ ಪ್ರತಿಯನ್ನು ತೋರಿಸಿ ನಮ್ಮೊಂದಿಗೆ ಬರುವಂತೆ ತಿಳಿಸಿದಾಗ ಆರೋಪಿಯು ವಾರಂಟನ್ನು ಕಿತ್ತುಕೊಂಡು ನೀವು ಯಾವ ಸೀಮೆಯ ಪೆÇಲೀಸರು? ನನ್ನನ್ನು ಏನು ಮಾಡಲು ಆಗುವುದಿಲ್ಲ, ರಂಡೆ ಮಕ್ಕಳೇ ಎಂದು ಹೇಳಿ ಪೊಲೀಸರ ಅಂಗಿಯ ಕಾಲರ್ ಹಿಡಿದು ಉರುಡಾಟ ನಡೆಸಿ ಇತರ ಆರೋಪಿಗಳನ್ನು ಕರೆದು ಅಕ್ರಮ ಕೂಟ ಸೇರಿಸಿ ಪಿಸಿ ಲೋಹಿತರವರ ಎಡಕೈ ತೋರುಬೆರಳಿಗೆ ಕಚ್ಚಿ ಗಾಯಗೊಳಿಸಿ ಕೈಯಿಂದ ಹೊಡೆದು ಕಲ್ಲು ಎಸೆದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2022 ಕಲಂ 143, 147, 148, 504, 353, 332 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment