ಮಂಗಳೂರು, ಎಪ್ರಿಲ್ 06, 2022 (ಕರಾವಳಿ ಟೈಮ್ಸ್) : ಯಾವುದೇ ಸಕಾರಣ ನೀಡದೆ ರಾಜ್ಯ ಸರಕಾರ ರಹೀಂ ಉಚ್ಚಿಲ್ ಅವರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ ರದ್ದುಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಬಿಜೆಪಿ ಸರಕಾರದಲ್ಲಿ ರಹೀಂ ಉಚ್ಚಿಲ ಅವರನ್ನು 2ನೇ ಬಾರಿಗೆ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಕೆ ಆರ್ ರಮೇಶ್ ಅವರು ಏಕಾಏಕಿ ಮಂಗಳವಾರ ಲಿಖಿತ ಆದೇಶ ಹೊರಡಿಸಿದ್ದು, ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರಹೀಂ ಉಚ್ಚಿಲ ಅವರ ಅಧ್ಯಕ್ಷ ಪದವಿಯನ್ನು ರದ್ದುಪಡಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಪದವಿ ರದ್ದತಿಗೆ ಯಾವುದೇ ಕಾರಣ ತಿಳಿಸಲಾಗಿಲ್ಲ.
0 comments:
Post a Comment