ಬಂಟ್ವಾಳ, ಎಪ್ರಿಲ್ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಮಂಗಳವಾರ ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ವೇಳೆ ಬೆಂಗಳೂರು ಮೂಲದ ಭಾಸ್ಕರ ಪೈ ಅವರಿಗೆ ಕುಟುಂಬಿಕರ ಸಮ್ಮುಖದಲ್ಲೇ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು ಆರೋಪಿಗಳಾದ ಕಣ್ಣೂರು ನಿವಾಸಿ ಸಹೋದರರಾದ ಇಸ್ಮಾಯಿಲ್ ಯಾನೆ ಬಾತಿಶ್ ಹಾಗೂ ಯಾಸೀನ್ ಅವರನ್ನು ಬುಧವಾರ ಬಂಧಿಸಿದ್ದಾರೆ.
ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಎರಡು ಕಾರುಗಳು ಸೈಡ್ ಕೊಡುವ ವಿಚಾರದಲ್ಲಿ ಕಾರಿನ ಸೈಡ್ ಮಿರರ್ ಗೆ ಡಿಕ್ಕಿಯಾಗಿದೆ. ಈ ವಿಷಯದಲ್ಲಿ ಎರಡೂ ಕಾರುಗಳ ಚಾಲಕರ ನಡುವೆ ಮಾತಿನ ಚಕಮಕಿ ನಡೆದು ಸಹೋದರರಿಬ್ಬರು ಬೆಂಗಳೂರು ಮೂಲದ ನಿವಾಸಿ ಭಾಸ್ಕರ್ ಪೈ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಲಾಟೆಯ ದೃಶ್ಯ ಟೋಲ್ ಬೂತ್ ಸೀಸಿ ಟಿವಿಯಲ್ಲಿ ಸೆರೆಯಾಗಿತ್ತು. ಘಟನೆಯ ಬಗ್ಗೆ ಭಾಸ್ಕರ ಪೈ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು. ಭಾಸ್ಕರ್ ಪೈ ಅವರ ದೂರಿನಂತೆ ಸೀಸಿ ಟಿವಿ ಫೂಟೇಜ್ ಪರಿಶೀಲನೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
0 comments:
Post a Comment