ಬಂಟ್ವಾಳ, ಎಪ್ರಿಲ್ 12, 2022 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ಎಪ್ರಿಲ್ 17 ರಂದು ಬಂಟ್ವಾಳ ತಾಲೂಕು, ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮತ್ತೆ ಆರಂಭಗೊಳ್ಳುವ ಮೂಡೂರು-ಪಡೂರು ಖ್ಯಾತಿಯ ‘ಬಂಟ್ವಾಳ’ ಕಂಬಳ ಪ್ರಯುಕ್ತ ರಮಾನಾಥ ರೈ ಅವರು ಮಂಗಳವಾರ ಬೆಳಿಗ್ಗೆ ಬಂಟ್ವಾಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ನಾವೂರಗುತ್ತು ಸುಜಿತ್ ಜೈನ್ ಅವರ ಮನೆಯಲ್ಲಿ ದೈವ ಪ್ರಾರ್ಥನೆ ಸಲ್ಲಿಸಿ ಕೂಡಿಬೈಲು ಕಂಬಳ ಕರೆಯ ಮುಹೂರ್ತ ಪೂಜೆ ನೆರವೇರಿಸಿದರು.
ಈ ಸಂದರ್ಭ ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಪ್ರಮುಖರಾದ ಬಿ ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮೆಲ್ವಿನ್ ಡಯಾಸ್, ಉಮೇಶ್ ಕುಲಾಲ್, ಪುರಷೋತ್ತಮ ಬಂಗೇರ, ಲೋಲಾಕ್ಷ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಪ್ರವೀಣ್ ಕಿಣಿ, ವಾಸು ಪೂಜಾರಿ, ಸುಜಿತ್ ಜೈನ್, ವೆಂಕಪ್ಪ ಪೂಜಾರಿ ಮೊದಲಾದವರು ಜೊತೆಗಿದ್ದರು.
0 comments:
Post a Comment