ಬಂಟ್ವಾಳ, ಎಪ್ರಿಲ್ 15, 2022 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಭಾರತರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ) ಜೋಡುಮಾರ್ಗ ಇದರ ನೇತೃತ್ವದಲ್ಲಿ ನಡೆದ ಮಹಾ ನಾಯಕ ಡಾ ಬಿ ಆರ್ ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಕೆ ಸತೀಶ್ ಅರಳ, ಗೌರವಾಧ್ಯಕ್ಷ ಜನಾರ್ದನ ಬೋಳಂತೂರು, ಕಾರ್ಯಾಧ್ಯಕ್ಷ ರಾಜಾ ಚೆಂಡ್ತಿಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೃಷ್ಣಾಪುರ, ಕೋಶಾಧಿಕಾರಿ ಶ್ರೀನಿವಾಸ್ ಆರ್ಬಿಗುಡ್ಡೆ, ಜೊತೆ ಕಾರ್ಯದರ್ಶಿ ಸಂತೋಷ್ ಭಂಡಾರಿಬೆಟ್ಟು, ಉಪಾಧ್ಯಕ್ಷರುಗಳಾದ ಪಿ ಕೇಶವ ನಾಯ್ಕ ಮತ್ತು ಕೃಷ್ಣಪ್ಪ ಪುದ್ದೋಟ್ಟು, ಕ್ರೀಡಾಧ್ಯಕ್ಷ ಚಂದ್ರಹಾಸ ಆರ್ಬಿಗುಡ್ಡೆ, ಗೌರವ ಸಲಹೆಗಾರ ನಾರಾಯಣ ಬಂಗೇರ ಕೃಷ್ಣಾಪುರ, ಸಂಘಟನಾ ಕಾರ್ಯದರ್ಶಿ ಉಮೇಶ್ ಕೃಷ್ಣಾಪುರ, ಸಾಮಾಜಿಕ ಜಾಲತಾಣ ಉಸ್ತುವಾರಿಗಳಾದ ಪ್ರೇಮ್ ರಾಜ್ ದ್ರಾವಿಡ್ ಪಲ್ಲಮಜಲು, ರಕ್ಷಿತ್ ಸರಪಾಡಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment