ಬಂಟ್ವಾಳ, ಮಾರ್ಚ್ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಯಂಗ್ ಫ್ರೆಂಡ್ಸ್ ಆಶ್ರಯದಲ್ಲಿ ಭಾನುವಾರ ಆಲಡ್ಕ ಮೈದಾನದಲ್ಲಿ ನಡೆದ ಆಲಡ್ಕ ಚಾಂಪಿಯನ್ಸ್ ಲೀಗ್-2022 ಅಂಡರ್ ಆರ್ಮ್ ಕ್ರಿಕೆಟ್ ಕೂಟದಲ್ಲಿ ಇರ್ಶಾದ್ ಇಚ್ಚ ಮಾಲಕತ್ವದ, ರಾಫಿದ್ ನಾಯಕತ್ವದ ಇಚ್ಚಾ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಮೂಡಿ ಬಂತು. ಬೀಯಿಂಗ್ ಭೂಯಾ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಇಚ್ಚಾ ವಾರಿಯರ್ಸ್ ತಂಡದ ರಾಫಿದ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಜಮಾಲ್ ಉತ್ತಮ ಬೌಲರ್ ಪ್ರಶಸ್ತಿ ಪಡೆದುಕೊಂಡರು. ಬೀಯಿಂಗ್ ಭೂಯಾ ತಂಡದ ಆಲ್ ರೌಂಡರ್ ಬಾತಿಶ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಇರಾ ಗ್ರಾ ಪಂ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ದ ಕ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇರ್ಶಾದ್ ಗುಡ್ಡೆಅಂಗಡಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ ಪಾಣೆಮಂಗಳೂರು ವಲಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಖಾದರ್ ಪಿಬಿಎಚ್ ಬಂಗ್ಲೆಗುಡ್ಡೆ, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನಾಕ ಮೆಲ್ಕಾರ್, ಸುಲೈಮಾನ್ ರೆಂಗೇಲ್, ನವಾಝ್ ಗುಡ್ಡೆಅಂಗಡಿ, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಅಬ್ದುಲ್ ಜಬ್ಬಾರ್ ಆಲಡ್ಕ ಪಡ್ಪು ಮೊದಲಾದವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಕೂಟದ ಆಯೋಜಕರಾದ ಅಶ್ಫಾಕ್ ಸ್ವಾಗತಿಸಿ, ಸಾಬಿತ್ ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ನಿರೂಪಿಸಿದರು. ತೌಸೀಫ್ ಯು ಹಾಗೂ ನೌಫಲ್ ಬಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಕೂಟದಲ್ಲಿ ಉಳಿದಂತೆ ಟೀಂ ಡಿಎಕ್ಸ್‍ಬಿ, ಟೀಂ ಹಯಾಮಾ ವಾರಿಯರ್ಸ್ ಹಾಗೂ ಚಬಕ್ ವಾರಿಯರ್ಸ್ ತಂಡಗಳು ಭಾಗವಹಿಸಿತ್ತು.
0 comments:
Post a Comment