ಮಂಗಳೂರು, ಮಾರ್ಚ್ 08, 2022 (ಕರಾವಳಿ ಟೈಮ್ಸ್) : ನಗರದ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಇದರ ಅಂಗ ಸಂಸ್ಥೆಯಾಗಿರುವ ಕೆಂಜಾರು ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗೆ 2020-2021ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಐದು ಮಂದಿ ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.
ಎಂ ಟೆಕ್ ಕನ್ಸ್ಟ್ರಕ್ಷನ್ ಟೆಕ್ನಾಲಜಿ ವಿಭಾಗದಲ್ಲಿ ಕು ನಫೀಝ ಮಿನ್ನತ್ ಎಂ ಟಿ 9.32 ಸಿಜಿಪಿಎಯೊಂದಿಗೆ 2ನೇ ರ್ಯಾಂಕ್, ಎಂಬಿಎ (ಮಾಸ್ಟರ್ ಆಫ್ ಬಿಸೆನೆಸ್ ಅಡ್ಮಿನಿಸ್ಟ್ರೇಶನ್) ವಿಭಾಗದಲ್ಲಿ ಕು ಸುಶ್ಮಿತಾ ಎಸ್ ಶೆಟ್ಟಿ 8.74 ಸಿಜಿಪಿಎಯೊಂದಿಗೆ ಹಾಗೂ ಕು ವೈಷ್ಣವಿ ಎಸ್ ಶೆಟ್ಟಿ 8.74 ಸಿಜಿಪಿಎಯೊಂದಿಗೆ 8ನೇ ರ್ಯಾಂಕ್, ಎರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕು ಆಶಾ ಎ 8.94 ಸಿಜಿಪಿಎಯೊಂದಿಗೆ 8ನೇ ರ್ಯಾಂಕ್ ಹಾಗೂ ವಿನೋದ್ ಸಿಂಗ್ ಮದನ್ ಸಿಂಗ್ ರಾಜ್‍ಪೂತ್ ಅವರು 8.93 ಸಿಜಿಪಿಎಯೊಂದಿಗೆ 9ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
0 comments:
Post a Comment