ನವದೆಹಲಿ, ಮಾರ್ಚ್ 29, 2022 (ಕರಾವಳಿ ಟೈಮ್ಸ್) : ವಾಟ್ಸಪ್ ಪ್ರತಿ ಬಾರಿ ಹೊಸ ಹೊಸ ಫೀಚರ್ಸ್ ಮೂಲಕ ಗ್ರಾಹಕರಿಗೆ ಸುಲಭ ಹಾಗೂ ತಡೆರಹಿತ ಸೇವೆ ನೀಡುವ ಪ್ರಯತ್ನ ಮಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಮೊಬೈಲ್ ಡೇಟಾ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಬಳಕೆಯೂ ನಿಯಮಿತವಾಗುತ್ತಿದೆ. ಇದೀಗ ವಾಟ್ಸಪ್ ಮೂಲಕ ಅತೀ ಕಡಿಮೆ ಮೊಬೈಲ್ ಡೇಟಾ ಮೂಲಕ ಕರೆ ಮಾಡಲು ಸಾಧ್ಯವಾಗುವಂತೆ ಅವಕಾಶ ನೀಡಲಾಗಿದೆ.
ವ್ಯಾಟ್ಸಪ್ ವಿಡಿಯೋ ಹಾಗೂ ವಾಯ್ಸ್ ಕಾಲ್‍ಗೆ ಹೆಚ್ಚಿನ ಡೇಟಾ ಅವಶ್ಯಕತೆ ಇದೆ. ಇದರಿಂದ ಗ್ರಾಹಕರು ಚಿಂತೆ ಪಡಬೇಕಿಲ್ಲ. ಸೆಟ್ಟಿಂಗ್ಸ್ ಮೂಲಕ ನಿಮ್ಮ ವಾಟ್ಸಪ್ ಕರೆಗೆ ಅತೀ ಕಡಿಮೆ ಡೇಟಾ ಬಳಕೆಯಾಗುವಂತೆ ಮಾಡಲು ಸಾಧ್ಯವಿದೆ. ಇದರಿಂದ ದಿನ ನಿತ್ಯದ ಡೇಟಾ ಬಳಕೆಯನ್ನು ಉಳಿತಾಯ ಮಾಡಬಹುದು.
ಅಂಡ್ರಾಯ್ಡ್ ಫೆÇೀನ್ ಬಳಕೆದಾರರಿಗೆ ವಾಟ್ಸಪ್ ಕರೆಗೆ ಕಡಿಮೆ ಡೇಟಾ ಬಳಕೆ ಮಾಡಲು ವಾಟ್ಸಪ್ ಅಪ್ಲಿಕೇಶನ್ ಒಪನ್ ಮಾಡಿ, ಮೇಲ್ಭಾಗದ ಬಲಭಾಗದಲ್ಲಿರುವ ಮೂರು ಡಾಟ್ ಐಕಾನ್ ಕ್ಲಿಕ್ ಮಾಡಬೇಕು, ಮೆನುವಿನಲ್ಲಿ ಸೆಟ್ಟಿಂಗ್ಸ್ ಆಯ್ಕೆ ಮಾಡಬೇಕು, ಬಳಿಕ ಸ್ಟೋರೇಜ್ ಹಾಗೂ ಡೇಯಾ ಆಯ್ಕೆಯನ್ನು ಕ್ಲಿಕ್ ಮಾಡಬೇಕು, ಯೂಸ್ ಲೆಸ್ ಡೇಟಾ ಫಾರ್ ಕಾಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಐಫೆÇೀನ್ ಬಳಕೆದಾರರು ವಾಟ್ಸಪ್ ಆಪ್ ಒಪನ್ ಮಾಡಿ ಅಪ್ಲಿಕೇಶನ್ ಕೆಳಭಾಗದ ಬಲಬದಿಯಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಬೇಕು, ಬಳಿಕ ಸ್ಟೋರೇಜ್ ಹಾಗೂ ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಬೇಕು, ನೆಟ್‍ವರ್ಕ್ ಸೆಲೆಕ್ಷನ್ ಆಯ್ಕೆಯಲ್ಲಿ ಯೂಸ್ ಲೆಸ್ ಡೇಟಾ ಫಾರ್ ಕಾಲ್ಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಈ ಆಯ್ಕೆ ಮಾಡಿದರೆ ಅತೀ ಕಡಿಮೆ ಡೇಟಾದಲ್ಲಿ ವಾಟ್ಸಪ ಕರೆ ಮಾಡಲು ಸಾಧ್ಯವಿದೆ. ಸಾಮಾನ್ಯವಾಗಿ ವಾಟ್ಸಪ್ ಕರೆಗೆ ಕನಿಷ್ಠ 720 ಕೆಬಿ ಡೇಟಾ ಅತೀ ಅವಶ್ಯಕ. ಇದರಿಂದ ದಿನ ಬಳಕೆ ಡೇಟಾ ಕೊರತೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕಡಿಮೆ ಬಳಕೆ ಆಯ್ಕೆ ಮಾಡಿಕೊಂಡರೆ ಯಾವುದೇ ಚಿಂತೆ ಇಲ್ಲದೆ ವಾಟ್ಸಪ್ ಕರೆ ಮಾಡಬುಹುದು.
ಅದೇ ರೀತಿ ವಾಟ್ಸಪ್ ಮೂಲಕ ಇನ್ನು ಮುಂದೆ 2ಜಿಬಿ ಫೈಲ್ ಶೇರ್ ಮಾಡಲು ಅವಕಾಶ ದೊರೆಯಲಿದೆ. ಸದ್ಯ ಬಳಕೆದಾರರು ಹೆಚ್ಚಿನ ಗಾತ್ರದ ಫೈಲ್ ಕಳುಹಿಸಲು ಸಾಧ್ಯವಿಲ್ಲ. ಆದರೆ ಶೀಘ್ರದಲ್ಲೇ ಬಳಕೆದಾರರು 2ಜಿಬಿ ಫೈಲ್ಸ್ ಸೆಂಡ್ ಮಾಡಲು ಸಾಧ್ಯವಾಗಲಿದೆ ಎಂದು ವಾಟ್ಸಪ್ ಹೇಳಿಕೊಂಡಿದೆ.
ಸದ್ಯ 100ಎಂಬಿ ಫೈಲ್ಸ್ ಸೆಂಡ್ ಮಾಡಲು ವಾಟ್ಸಪ್ ಅವಕಾಶ ನೀಡಿದೆ. ಆದರೆ ಇದೀಗ ಗರಿಷ್ಠ 2ಜಿಬಿ ವರೆಗಿನ ಫೈಲ್ಸ್ ಸೆಂಡ್ ಮಾಡಲು ಅವಕಾಶ ನೀಡಲು ವಾಟ್ಸಪ್ ಫೀಚರ್ ಸಿದ್ದಪಡಿಸಿಸುತ್ತಿದೆ. ಅರ್ಜಂಟೈನಾದಲ್ಲಿ ಪ್ರಾಯೋಗಿಕ ಹಂತವಾಗಿ ಈ ಫೀಚರ್ಸ್ ಪರಿಚಯಿಸಿದೆ. ಇದರಿಂದ ಒಂದೇ ಸಮಯದಲ್ಲಿ 2 ಜಿಪಿ ಫೈಲ್ಸ್ ಕಳುಹಿಸಲು ಸಾಧ್ಯವಾಗಲಿದೆ.
ಪ್ರಾಯೋಗಿಕ ಹಂತದಲ್ಲಿರುವ ಈ ಫೀಚರ್ಸ್ ಭಾರತ ಸೇರಿದಂತೆ ಇತರ ದೇಶಗಳ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಅನ್ನೋ ಕುರಿತು ಶೀಘ್ರದಲ್ಲೇ ಬಹಿರಂಗವಾಗಲಿದೆ. ಟೆಲಿಗ್ರಾಂ ಸೇರಿದಂತೆ ಹಲವು ಚಾಟಿಂಗ್ ಆಪ್‍ಗಳು ಲಭ್ಯವಿದೆ. ಹೀಗಾಗಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹಾಗೂ ಹೊಸ ಗ್ರಾಹಕರನ್ನು ಸೆಳೆಯಲು ವಾಟ್ಸಪ್ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ.
0 comments:
Post a Comment