ಬಂಟ್ವಾಳ, ಮಾರ್ಚ್ 28, 2022 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ ಹೈದರಾಲಿ ಅವರ ಮನೆ ಕಳವು ಪ್ರಕರಣ ಬೇಧಿಸಿದ ಪೊಲೀಸ್ ತಂಡ ಆರೋಪಿ ಬಶೀರ್ @ ಅಬ್ದುಲ್ ಬಶೀರ್ @ ರಾಧುಕಟ್ಟೆ ಬಶೀರ್‍ನನ್ನು ಭಾನುವಾರ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕಡಂಬು ನಿವಾಸಿ ಹೈದರಾಲಿ ಅವರ ಬೀಗ ಹಾಕಿದ ಮನೆಯ ಬೀಗವನ್ನು ಮುರಿದು ಮಾರ್ಚ್ 13 ರಂದು ರಾತ್ರಿ ಮನೆಯ ಬೆಡ್‍ರೂಂನಲ್ಲಿರುವ ಎರಡು ಕಪಾಟಿನಲ್ಲಿದ್ದ 2.5 ಗ್ರಾಂ ಚಿನ್ನದ ಉಂಗುರ ಹಾಗೂ 4 ಗ್ರಾಂ ತೂಕದ ಕಿವಿಯ ಓಲೆಯನ್ನು ಕಳವು ಮಾಡಲಾದ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 43/2022 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸ್ ತಂಡ ಆರೋಪಿ ಬಶೀರ್ @ ಅಬ್ದುಲ್ ಬಶೀರ್ @ ರಾಧುಕಟ್ಟೆ ಬಶೀರ್‍ನನ್ನು ವಿಟ್ಲ ಠಾಣಾ ವ್ಯಾಪ್ತಿಯ ರಾಧುಕಟ್ಟೆಯಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ಆರೋಪಿಯು ಕಳ್ಳತನ ಮಾಡಿದ ಚಿನ್ನದ ಕಿವಿಯೋಲೆ ಮತ್ತು ಚಿನ್ನದ ಉಂಗುರ ಕೃತ್ಯಕ್ಕೆ ಬಳಸಲಾದ ಯಮಹಾ ಕಂಪೆನಿಯ ಮೋಟಾರ್ ಸೈಕಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 1 ಲಕ್ಷ ರೂಪಾಯಿಗಳು.
ಆರೋಪಿ ಬಶೀರ್ @ ಅಬ್ದುಲ್ ಬಶೀರ್ @ ರಾಧುಕಟ್ಟೆ ಬಶೀರ್ ವಿಟ್ಲ ಠಾಣಾ ವ್ಯಾಪ್ತಿಯ ಹಲವಾರು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದು, ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಚಿನ್ನದಂಗಡಿ ಕೊರೆದು ಕಳ್ಳತನ ಮಾಡಿದ ಪ್ರಕರಣದಲ್ಲಿ ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿರುತ್ತಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೊನಾವಣೆ ಮತ್ತು ಅಡಿಷನಲ್ ಎಸ್ಪಿ ಕುಮಾರಚಂದ್ರ ಅವರುಗಳ ಮಾರ್ಗದರ್ಶನ, ಬಂಟ್ವಾಳ ಡಿವೈಎಸ್ಪಿ ಪ್ರತಾಪ ಸಿಂಗ್ ಥೂರಟ್ ಅವರ ನೇತೃತ್ವದಲ್ಲಲಿ ವಿಟ್ಲ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ನಾಗರಾಜ್ ಎಚ್ ಇ ಅವರ ಸಾರಥ್ಯದಲ್ಲಿ ಪಿಎಸ್ಸೈಗಳಾದ ಸಂದೀಪ ಕುಮಾರ್ ಶೆಟ್ಟಿ, ಸಂಜೀವ ಪುರುಷ, ಎಚ್.ಸಿ.ಗಳಾದ ಜಯರಾಮ, ಪ್ರಸನ್ನ, ಪಿಸಿಗಳಾದ ಹೇಮರಾಜ, ಅಶೋಕ್ ಅವರು ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment