ಮಂಗಳೂರು, ಮಾರ್ಚ್ 10, 2022 (ಕರಾವಳಿ ಟೈಮ್ಸ್) : ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾಂ ನಡೆಸಿದ 2020-2021ನೇ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ 6 ವಿದ್ಯಾರ್ಥಿಗಳು ವಿವಿಧ ವಿಭಾಗಳಲ್ಲಿ ರ್ಯಾಂಕ್ ಗಳಿಸಿರುತ್ತಾರೆ.
ನ್ಯಾನೋ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿ ನವನೀತ ಗೌಡ ಎಂ ಒಟ್ಟು 9.56 ಸಿಜಿಪಿಎಯೊಂದಿಗೆ ಪ್ರಥಮ ರ್ಯಾಂಕ್ ಗಳಿಸಿ ವಿಟಿಯು ಚಿನ್ನದ ಪದಕ ಪಡೆದಿರುತ್ತಾರೆ. ಅದೇ ವಿಭಾಗದಲ್ಲಿ 9.50 ಸಿಜಿಪಿಎಯೊಂದಿಗೆ ಅನುಷಾ ಬಿ ಶೆಟ್ಟರ್ 2ನೇ ರ್ಯಾಂಕ್ ಪಡೆದಿರುತ್ತಾರೆ.
ಮರೈನ್ ಇಂಜಿನಿಯರಿಂಗ್ ವಿಭಾಗದಲ್ಲಿ 9.11 ಸಿಜಿಪಿಎಯೊಂದಿಗೆ ಮುೃದುಲ ಟಿ ಎಚ್ 3ನೇ ರ್ಯಾಂಕ್, 8.90 ಸಿಜಿಪಿಎಯೊಂದಿಗೆ ಗಣೇಶ್ ಎಂ ಕಳ್ಳಿಮನೆ 5ನೇ ರ್ಯಾಂಕ್ ಹಾಗೂ 8.78 ಸಿಜಿಪಿಎಯೊಂದಿಗೆ ನಿಶಾನ್ 7ನೇ ರ್ಯಾಂಕ್ ಗಳಿಸಿರುತ್ತಾರೆ. ಎಂಸಿಎ ವಿಭಾಗದಲ್ಲಿ ಕೀರ್ತಿ ನಾರಾಯಣ್ ಪಟಗಾರ್ 9.25 ಸಿಜಿಪಿಎಯೊಂದಿಗೆ 3ನೇ ರ್ಯಾಂಕ್ ಗಳಿಸಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
0 comments:
Post a Comment