ಬಂಟ್ವಾಳ, ಮಾರ್ಚ್ 06, 2022 (ಕರಾವಳಿ ಟೈಮ್ಸ್) : ಕರ್ನಾಟಕ ಟೈಲರ್ಸ್ ಎಸೋಸಿಯೇಶನ್ (ರಿ) ಮಂಗಳೂರು ಇದರ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥಾಪನಾ ದಿನಾಚರಣೆ ಹಾಗೂ ಅಶಕ್ತರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಮಾರ್ಚ್ 7 ರಂದು ಸೋಮವಾರ (ನಾಳೆ) ಬೆಳಿಗ್ಗೆ 10 ಗಂಟೆಗೆ ಬಿ ಸಿ ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಉದ್ಘಾಟಿಸಲಿದ್ದು, ಕೆ.ಎಸ್.ಟಿ.ಎ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ನಾಗೇಶ್ ಎಂ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್., ಕೆ.ಎಸ್.ಟಿ.ಎ. ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಜಿಲ್ಲಾ ಕೋಶಾಧಿಕಾರಿ ಈಶ್ವರ ಕುಲಾಲ್, ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಬಂಟ್ವಾಳ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಸನ್ಫತ್ ಶರೀಪ್, ಪ್ರಮುಖರಾದ ಶ್ರೀಮತಿ ರೂಪಾ ರಾಜೇಶ್ ಶೆಟ್ಟಿ ಸಾಯಿ ಸದನ, ರಾಯಿ, ಸೀತಾಲ, ಶ್ರೀಮತಿ ಅಶ್ವಿನಿ ವಸಂತ ಶೆಟ್ಟಿ ರಾಯಿ, ಡಾ ಗೋಪಾಲಕೃಷ್ಣ ಆಚಾರ್ಯ ಬಜಾರ್, ಸೇಸಪ್ಪ ಕೋಟ್ಯಾನ್, ಸುಧಾಕರ ಸಾಲ್ಯಾನ್, ಸುರೇಶ್, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಮಚ್ಚೇಂದ್ರನಾಥ್ ಗುರುಕೃಪಾ ಮೊದಲಾದವರು ಭಾಗವಹಿಸುವರು ಎಂದು ಸಂಸ್ಥೆಯ ಪರವಾಗಿ ತುಳಸಿ ಆರ್, ಯಾದೇಶ್ ತುಂಬೆ, ನಾಗೇಶ್ ಎಂ ಅವರು ಜಂಟಿ ಪಕ್ರಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment