ಶ್ರೀನಿವಾಸ ಫಿಸಿಯೋಥೆರಪಿ ವಿಭಾಗದಲ್ಲಿ ಭೌತಚಿಕಿತ್ಸೆಯಲ್ಲಿ ಸುಧಾರಿತ ಚಿಕಿತ್ಸಕ ಉಪಕರಣಗಳ ಉದ್ಘಾಟನೆ - Karavali Times ಶ್ರೀನಿವಾಸ ಫಿಸಿಯೋಥೆರಪಿ ವಿಭಾಗದಲ್ಲಿ ಭೌತಚಿಕಿತ್ಸೆಯಲ್ಲಿ ಸುಧಾರಿತ ಚಿಕಿತ್ಸಕ ಉಪಕರಣಗಳ ಉದ್ಘಾಟನೆ - Karavali Times

728x90

8 March 2022

ಶ್ರೀನಿವಾಸ ಫಿಸಿಯೋಥೆರಪಿ ವಿಭಾಗದಲ್ಲಿ ಭೌತಚಿಕಿತ್ಸೆಯಲ್ಲಿ ಸುಧಾರಿತ ಚಿಕಿತ್ಸಕ ಉಪಕರಣಗಳ ಉದ್ಘಾಟನೆ

ಮಂಗಳೂರು, ಮಾರ್ಚ್ 08, 2022 (ಕರಾವಳಿ ಟೈಮ್ಸ್) : ಶ್ರೀನಿವಾಸ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿಭಾಗದಲ್ಲಿ ಭೌತಚಿಕಿತ್ಸೆಯಲ್ಲಿ ಸುಧಾರಿತ ಚಿಕಿತ್ಸಕ ಉಪಕರಣಗಳ ಉದ್ಘಾಟನಾ ಸಮಾರಂಭ ನಗರದ ಪಾಂಡೇಶ್ವರದಲ್ಲಿರುವ ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಸೋಮವಾರ (ಮಾ 7) ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿ¯್ಲÁಧಿಕಾರಿ ಡಾ ರಾಜೇಂದ್ರ ಕೆ ವಿ ಮಾತನಾಡಿ, ಶ್ರೀನಿವಾಸ ಫಿಸಿಯೋಥೆರಪಿ ಸಂಸ್ಥೆಯು ಒದಗಿಸುತ್ತಿರುವ ಗುಣಮಟ್ಟದ ರೋಗಿಗಳ ಸೇವೆ ಸಮಾಜಕ್ಕೆ ಮಾದರಿ ಎಂದರು. 

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಮತ್ತು ಅಧ್ಯP್ಷÀ ಹಾಗೂ ಎ ಶಾಮರಾವ್ ಪ್ರತಿಷ್ಠಾನ ಅಧ್ಯP್ಷÀ ಡಾ ಸಿ ಎ ಎ ರಾಘವೇಂದ್ರ ರಾವ್ ಅಧ್ಯP್ಷÀತೆ ವಹಿಸಿದ್ದರು. 

ಈ ಹೊಸ ಉಪಕರಣಗಳು ಪುನರಾವರ್ತಿತ ಪೆರಿಫೆರಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಶನ್ (ಆರ್.ಪಿ.ಎಂ.ಎಸ್) ಆಗಿದ್ದು, ಇದು ಕ್ಯಾನ್ಸರ್ ನೋವು ಸೇರಿದಂತೆ ಎಲ್ಲ ರೀತಿಯ ತೀವ್ರವಾದ ಮತ್ತು ದೀರ್ಘಕಾಲದ ಮೂಳೆ ಸಂಬಂಧಿತ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒತ್ತಡದ ಮೂತ್ರದ ಅಸಂಯಮ ಮತ್ತು ವಯಸ್ಸಿಗೆ ಸಂಬಂಧಿಸಿದ ಪ್ರಚೋದನೆಯ ಅಸಂಯಮದಿಂದ ಬಳಲುತ್ತಿರುವ ರೋಗಿಗಳನ್ನು ಗುಣಪಡಿಸುತ್ತದೆ. ಮತ್ತೊಂದು ಸಾಧನವೆಂದರೆ ಡಿಕಂಪ್ರೆಷನ್ ಸ್ಪೈನಲ್ ಥೆರಪಿ ಯುನಿಟï. ಇದು ಮುಂಗಡ ಚಿಕಿತ್ಸಕ ಘಟಕವಾಗಿದ್ದು, ಪ್ರತ್ಯೇಕ ಬೆನ್ನು ಮೂಳೆಯ ಭಾಗಕ್ಕೆ ಎಳೆತವನ್ನು ನೀಡುತ್ತದೆ ಮತ್ತು ನರಗಳ ಸಂಕೋಚನವನ್ನು ನಿವಾರಿಸುತ್ತದೆ ಮತ್ತು ಇದರಿಂದಾಗಿ ಡಿಸ್ಕ್ ಹರ್ನಿಯೇಷನ್ ಅನ್ನು ಕಡಿಮೆ ಮಾಡುತ್ತದೆ.

ಪಾಂಡೇಶ್ವರದ ಶ್ರೀನಿವಾಸ್ ಫಿಸಿಯೋಥೆರಪಿ ಹೊರರೋಗಿ ಘಟಕದಲ್ಲಿ ಲಭ್ಯವಿರುವ ಲೇಸರ್, ವರ್ಚುವಲ್ ರಿಹ್ಯಾಬ್ ಯೂನಿಟ್ ಮತ್ತು ಫೋರ್ಸ್ ಪ್ಲೇಟ್‍ನಂತಹ ಇತರ ಇತ್ತೀಚಿನ ಉಪಕರಣಗಳನ್ನು ಜಿ¯್ಲÁಧಿಕಾರಿ ಡಾ ರಾಜೇಂದ್ರ ಅವರು ಇದೇ ವೇಳೆ ವೀಕ್ಷಿಸಿದರು. 

ಈ ಸಂದರ್ಭ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಮತ್ತು ಎ ಶಾಮರಾವ್ ಪ್ರತಿಷ್ಠಾನದ ಉಪಾಧ್ಯP್ಷÀ ಡಾ ಎ ಶ್ರೀನಿವಾಸ್ ರಾವ್, ಉಪಕುಲಪತಿ ಡಾ ಪಿ ಎಸ್ ಐತಾಳ್, ವೈಸ್ ಚಾನ್ಸಲರ್ ಡಾ ಸತ್ಯ ಸಾಯಿಕುಮಾರ್, ರಿಜಿಸ್ಟ್ರಾರ್  ಡಾ ಅನಿಲï ಕುಮಾರ್, ಅಭಿವೃದ್ಧಿ ರಿಜಿಸ್ಟ್ರಾರ್ ಡಾ ಅಜಯ್ ಕುಮಾರ್, ಶ್ರೀನಿವಾಸ ವಿಶ್ವ ವಿದ್ಯಾಲಯದ ವಿವಿಧ ಕಾಲೇಜುಗಳ ಡೀನ್‍ಗಳು ಉಪಸ್ಥಿತರಿದ್ದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿಭಾಗದ ಡೀನ್ ಡಾ ರಾಜಶೇಖರ್ ಸ್ವಾಗತಿಸಿ, ಅಸೋಸಿಯೇಟ್ ಪೆÇ್ರಫೆಸರ್ ಡಾ ತ್ರಿಶಾಲಾ ನೊರೊನ್ಹಾ ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಶ್ರೀನಿವಾಸ ಫಿಸಿಯೋಥೆರಪಿ ವಿಭಾಗದಲ್ಲಿ ಭೌತಚಿಕಿತ್ಸೆಯಲ್ಲಿ ಸುಧಾರಿತ ಚಿಕಿತ್ಸಕ ಉಪಕರಣಗಳ ಉದ್ಘಾಟನೆ Rating: 5 Reviewed By: karavali Times
Scroll to Top