ಮಂಗಳೂರು, ಮಾರ್ಚ್ 06, 2022 (ಕರಾವಳಿ ಟೈಮ್ಸ್) : ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಮಂಗಳೂರು ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಶಿಬಿರವು ನಗರದ ಪುರಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಬಿ ಹೊಳ್ಳ ವಿದ್ಯಾರ್ಥಿ ವೇತನ ವಿತರಿಸಿದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಾರಾಯಣ ಶೇರಿಗಾರ್ ಪಿ ವಿ ಮಂಗಳೂರು, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ, ಹಿರಿಯ ನ್ಯಾಯವಾದಿಗಳಾದ ಎಂ ಆರ್ ಬಳ್ಳಾಲ್, ಕೆಪಿಎ ಶುಕೂರ್, ಮಂಗಳೂರು ಟ್ರಾಫಿಕ್ ಇನ್ಸ್‍ಪೆಕ್ಟರ್ ಗೋಪಾಲಕೃಷ್ಣ ಭಟ್, ಶ್ರೀರಾಂ ಸಂಸ್ಥೆಯ ಶ್ರೀಧರ ಮಟ್ಟಂ, ಶರಶ್ಚಂದ್ರ ಭಟ್ ಕಾಕುಂಜೆ,ಹಿರಿಯ ಕಾರ್ಮಿಕ ಅಧಿಕಾರಿ ರಾಜಶೇಖರ್ ರೆಡ್ಡಿ, ಶ್ರೀರಾಂ ಫೈನಾನ್ಸ್ ಸ್ಟೇಟ್ ಲೀಗಲ್ ಹೆಡ್ ಉಲ್ಲಾಸ್ ನಾಯಕ್, ಸ್ಟೇಟ್ ಕಲೆಕ್ಷನ್ ಹೆಡ್ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಸುಮಾರು 600 ಮಂದಿ ವಿದ್ಯಾರ್ಥಿಗಳಿಗೆ 18,21,000/- ವಿದ್ಯಾರ್ಥಿ ವೇತನ ವಿತರಿಸಲಾಯಿತು. ಟ್ರಾಫಿಕ್ ಇನ್ಸ್‍ಪೆಕ್ಟರ್ ಗೋಪಾಲಕೃಷ್ಣ ಭಟ್ ವಿದ್ಯಾರ್ಥಿಗಲಿಗೆ ಸಂಚಾರಿ ನಿಯಮಗಳ ಬಗ್ಗೆ ಶಿಬಿರ ನಡೆಸಿಕೊಟ್ಟರು.
ಇದೇ ವೇಳೆ ಸಾಮಾಜಿಕ ಕಲಾ ಮತ್ತು ಕ್ರೀಡಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಮಹಾಲಿಂಗ ನಾಯಕ್ ಅಮೈ, ರಾಷ್ಟ್ರೀಯ ಪ್ರಧಾನಮಂತ್ರಿ ಬಾಲ ಪುರಸ್ಕಾರ ವಿಜೇತ ಕುಮಾರಿ ರೆಮೋನಾ ಇವೆಟ್ ಪರೇರಾ, ಏಷಿಯನ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಸ್ವರ್ಣ ಪದಕ ವಿಜೇತೆ ಶ್ರೀಮತಿ ದೀಪಾ ಕೆ ಎಸ್, ಪೊಲೀಸ್ ಇಲಾಖೆಯಲ್ಲಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿಗಳಾದ ಮೋಹನ್ (ಸೆನ್ ಪೊಲೀಸ್ ಠಾಣೆ ಮಂಗಳೂರು) ಹಾಗೂ ವಿಜಯ್ ಕಾಂಚನ್ (ಸೆನ್ ಪೊಲೀಸ್ ಠಾಣೆ ಮಂಗಳೂರು), ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿಗಳಾದ ಅಬ್ದುಲ್ ಜಬ್ಬಾರ್ ಕೆ, (ಸಿಸಿಬಿ ಘಟಕ ಮಂಗಳೂರು), ಸುಜನ್ ಶೆಟ್ಟಿ (ಸಿಸಿಬಿ ಘಟಕ ಮಂಗಳೂರು), ಶ್ರೀಮತಿ ನಯನ (ಪಾಂಡೇಶ್ವರ ಪೊಲೀಸ್ ಠಾಣೆ ಮಂಗಳೂರು) ಹಾಗೂ ಸಂಚಾರ ವಿಭಾಗದಲ್ಲಿ ರವಿ (ಸಂಚಾರ ಪೂರ್ವ ಠಾಣೆ ಮಂಗಳೂರು), ಜಯರಾಂ (ಸಂಚಾರ ಪಶ್ಚಿಮ ಠಾಣೆ ಮಂಗಳೂರು), ಆಂಜನಪ್ಪ ವಿ (ಸಂಚಾರ ಉತ್ತರ ಠಾಣೆ) ಹಾಗೂ ಯಶವಂತ (ಸಂಚಾರ ದಕ್ಷಿಣ ಠಾಣೆ) ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ರೀಜನಲ್ ಬ್ಯುಸಿನೆಸ್ ಹೆಡ್ ಚೇತನ್ ಅರಸ್ ಹಾಗೂ ರೀಜನಲ್ ಕಲೆಕ್ಷನ್ ಹೆಡ್ ಪ್ರಮೋದ್ ಅಂಚನ್ ಅವರು ಕಾರ್ಯಕ್ರಮ ನಿರ್ವಹಿಸಿದರು.
0 comments:
Post a Comment