ಮಂಗಳೂರು, ಮಾರ್ಚ್ 19, 2022 (ಕರಾವಳಿ ಟೈಮ್ಸ್) : ನಗರದ ಹೊರವಲಯದ ಕೆಂಜಾರಿನಲ್ಲಿರುವ ಶ್ರೀದೇವಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಕಾಲೇಜಿನ 12ನೇ ವರ್ಷದ ಇಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ., ಎಂ.ಟೆಕ್ ವಿದ್ಯಾರ್ಥಿಗಳಿಗೆ ‘ಘಟಿಕೋತ್ಸವ’ ಮತ್ತು ರ್ಯಾಂಕ್ ವಿಜೇತರಿಗೆ ಸನ್ಮಾನ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಇದೇ ವೇಳೆ ಸಂಸ್ಥೆಯ ಸುಮಾರು 550ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ. ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ ಸದಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ನಿಧೀಶ್ ಎಸ್. ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಹಾಗೂ ನಿರ್ದೇಶಕ ಡಾ. ಕೆ.ಇ. ಪ್ರಕಾಶ್, ಪದವಿ ಪ್ರಧಾನ ಸಮಾರಂಭದ ಸಂಚಾಲಕ ಪೆÇ್ರ. ಸುಧೀರ್ ಕುಮಾರ್ ಬಿ.ಎನ್, ಪೆÇ್ರ. ಶ್ವೇತಾ ಪೈ ಹಾಗೂ ಪೆÇ್ರ. ದೇವಿಕಾ ಶೆಣೈ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
2020-2021ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಾದ ಎಂ.ಟೆಕ್ ಕನ್ಸ್ಟ್ರಕ್ಷನ್ ಟೆಕ್ನಾಲಜಿ ವಿಭಾಗದಲ್ಲಿ ಕು. ನಫೀಝ ಮಿನ್ನತ್ ಎಂ.ಟಿ 2ನೇ ರ್ಯಾಂಕ್, ಎಂ.ಬಿ.ಎ (ಮಾಸ್ಟರ್ ಆಫ್ ಬಿಸೆನೆಸ್ ಅಡ್ಮಿನಿಸ್ಟ್ರೇಶನ್) ವಿಭಾಗದಲ್ಲಿ ಕು. ಸುಶ್ಮಿತಾ ಎಸ್. ಶೆಟ್ಟಿ ಹಾಗೂ ಕು. ವೈಷ್ಣವಿ ಎಸ್. ಶೆಟ್ಟಿ 8ನೇ ರ್ಯಾಂಕ್, ಎರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕು. ಆಶಾ ಎ 8ನೇ ರ್ಯಾಂಕ್ ಹಾಗೂ ವಿನೋದ್‍ಸಿಂಗ್ ಮದನ್‍ಸಿಂಗ್ ರಾಜ್‍ಪೂತ್ 9ನೇ ರ್ಯಾಂಕ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪಿ.ಎಚ್.ಡಿ ಪದವಿ ವಿಜೇತೆ ಸ್ವಪ್ನಾ ಚನ್ನಗೌಡರ್ ಇವರುಗಳನ್ನು ಗೌರವಿಸಲಾಯಿತು. ಪ್ರತೀ ವಿಭಾಗದಿಂದ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರವನ್ನೂ ವಿತರಿಸಲಾಯಿತು. ಉಪನ್ಯಾಸಕಿಯರಾದ ಶೆರಿಲ್ ಆಯೋನ ಹಾಗೂ ರಕ್ಷಾ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment