ಮಂಗಳೂರು, ಮಾರ್ಚ್ 07, 2022 (ಕರಾವಳಿ ಟೈಮ್ಸ್) : ಸುನ್ನೀ ಮುಸ್ಲಿಂ ಲೋಕದ ಪ್ರಮುಖ ಪಂಡಿತರೂ, ಹಿರಿಯ ರಾಜಕೀಯ ನಾಯಕ, ಮುಸ್ಲಿಂ ಉಮ್ಮತ್ತಿನ ಕಷ್ಟ-ಕಾರ್ಪಣ್ಯಗಳಿಗೆ ಸದಾ ಮಿಡಿಯುವ ಹೃದಯವಂತಿಕೆಯ ನಾಯಕ, ಸಯ್ಯಿದ್ ಕುಟುಂಬದ ನೇತಾರ ಪಾಣಕ್ಕಾಡ್ ಸಯ್ಯಿದ್ ಹೈದರಾಲಿ ಶಿಹಾಬ್ ತಂಙಳ್ ಅವರ ನಿಧನ ಅತ್ಯಂತ ದುಃಖಕರವಾಗಿದೆ ಎಂದು ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಲವಾರು ಮೊಹಲ್ಲಾಗಳ ಖಾಝಿಯಾಗಿದ್ದ ಅವರು ಪಟ್ಟಿಕಾಡ್ ಜಾಮಿಯಾ ನೂರಿಯಾ, ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ, ಕಡಮೇರಿ ರಹ್ಮಾನಿಯಾ ಅರೇಬಿಕ್ ಕಾಲೇಜು ಮತ್ತು ನಂದಿ ದಾರುಸ್ಸಲಾಮ್ ಅರೇಬಿಕ್ ಕಾಲೇಜು ಸೇರಿದಂತೆ ನೂರಾರು ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಸಂಸ್ಥೆಗಳ ಅಧ್ಯಕ್ಷರಾಗಿ ಸಮಸ್ತ ಉಲಮಾ ಒಕ್ಕೂಟದ ಉಪಾಧ್ಯಕ್ಷರಾಗಿ, ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರಾಗಿದ್ದರು.
ಸೌಮ್ಯವಾಗಿ ಮತ್ತು ಸಕ್ರಿಯವಾಗಿ ಸಮುದಾಯದ ಒಳಿತಿಗಾಗಿ ಶ್ರಮಿಸಿದವರು ಸಯ್ಯಿದ್ ತಂಙಳ್ ಅವರು. ಸಯ್ಯಿದರ ಸರಳ ಜೀವನ ನಮಗೆಲ್ಲರಿಗೂ ಮಾದರಿಯಾಗಲಿ. ಸರ್ವಶಕ್ತನಾದ ಅಲ್ಲಾಹನು ಸಯ್ಯಿದರ ಬರ್ಝಖೀ ಜೀವನವನ್ನು ಉನ್ನತಿಗೇರಿಸಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ, ಹಿತೈಷಿಗಳಿಗೆ, ಬಂಧು-ಬಳಗಕ್ಕೆ ಮತ್ತು ಸಮುದಾಯಕ್ಕೆ ಅಲ್ಲಾಹು ಕರುಣಿಸಲಿ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದವರು ತಮ್ಮ ಸಂತಾಪ ಹೇಳಿಕೆಯಲ್ಲಿ ಪ್ರಾರ್ಥಿಸಿದ್ದಾರೆ.
0 comments:
Post a Comment