ಬಂಟ್ವಾಳ, ಮಾರ್ಚ್ 13, 2022 (ಕರಾವಳಿ ಟೈಮ್ಸ್) : ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳದ ವತಿಯಿಂದ ಸರ್ವಜ್ಞ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸರ್ವಜ್ಞ ಟ್ರೋಫಿ-2022 ಕ್ರಿಕೆಟ್ ಪಂದ್ಯಾಟ ಎಸ್.ವಿ.ಎಸ್. ಪ್ರೌಢ ಶಾಲಾ ಮೈದಾನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉತ್ತರ ಪ್ರದೇಶ ಗೋರಖ್‍ಪುರ ಗ್ಯಾಲೆಂಟ್ ಇಸ್ವತ್ ಕಂಪೆನಿ ಮಾಜಿ ಮಾಜಿ ಉಪಾಧ್ಯಕ್ಷ ಲೋಕನಾಥ ದೇವಂದಬೆಟ್ಟು, ಸಮಾಜಮುಖಿ ಸೇವೆಯ ಮೂಲಕ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು ಎಂದರು.
ಕುಲಾಲ ಯುವ ವೇದಿಕೆ ಅಧ್ಯಕ್ಷ ಸಂತೋಷ್ ಕುಲಾಲ ಮರ್ತಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಳ ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಲೋಹಿತ್ ಮೆಲ್ಕಾರ್, ರಾಜ್ಯ ಕುಂಬಾರರ ಯುವವೇದಿಕೆ ಪ್ರಾಂತೀಯ ಅಧ್ಯಕ್ಷ ಜಯೇಶ್ ಗೋವಿಂದ್, ಪಣೋಲಿಬೈಲು ಕುಲಾಲ ಯುವ ವೇದಿಕೆ ಅಧ್ಯಕ್ಷ ಪೂವಪ್ಪ ಕುಲಾಲ್, ಪತ್ರಕರ್ತ ಕಿಶೋರ್ ಪೆರಾಜೆ, ಉದ್ಯಮಿ ಸುರೇಶ್ ಕುಲಾಲ್, ಸಮಾಜ ಸೇವಕ ಗಣೇಶ್ ಕುಲಾಲ್ ಕೆದಿಲ, ನಿವೃತ್ತ ಶಿಕ್ಷಕ ಸೇಸಪ್ಪ ಮಾಸ್ತರ್, ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಯುವ ವೇದಿಕೆಯ ಗೌರವಾಧ್ಯಕ್ಷ ಮಾದವ ಕುಲಾಲ್, ಕುಲಾಲ ಸುಧಾರಕ ಸಂಘದ ದಳಪತಿ ವಿನೀತ್ ಮೈಯರಬೈಲು ಉಪಸ್ಥಿತರಿದ್ದರು.
28 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು, ಪ್ರೈಮ್ ಫ್ರೆಂಡ್ಸ್ ಬ್ರಹ್ಮರಕೂಟ್ಲು ಪ್ರಥಮ, ತುಂಬೆ ಕುಲಾಲ ಸಂಘದ ತಂಡ ದ್ವಿತೀಯ ಹಾಗೂ ನಾವೂರು ಕುಲಾಲ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಕಿಶೋರ್ ಕುಲಾಲ್ ಸ್ವಾಗತಿಸಿ, ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ ಪ್ರಸ್ತಾವನೆಗೈದರು. ನಾರಾಯಣ ಹೊಸ್ಮಾರ್ ವಂದಿಸಿದರು. ರವಿ ನೆರಂಬೊಳು ಕಾರ್ಯಕ್ರಮ ನಿರೂಪಿಸಿದರು. ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಲಾಲ್ ಪಲ್ಲಿಕಂಡ, ಗೌರವ ಲಹೆಗಾರ ವಿಠಲ ಪಲ್ಲಿಕಂಡ, ಕೋಶಾಧಿಕಾರಿ ನಿತೇಶ್ ಕಾಮಾಜೆ, ಜಿಲ್ಲಾ ವಲಯ ಸಂಚಾಲಕ ಪುನೀತ್ ಎಸ್ ಮೈರಾನ್‍ಪಾದೆ, ಜೊತೆ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಕುದನೆ, ಗಣೇಶ್ ಮರ್ತಾಜೆ, ಕ್ರೀಡಾ ಸಂಯೋಜಕ ಕಾರ್ತಿಕ್ ಬಂಟ್ವಾಳ ಹಾಗೂ ಯುವ ವೇದಿಕೆ ಸದಸ್ಯರು ಕ್ರಿಕೆಟ್ ಪಂದ್ಯಾಟಕ್ಕೆ ಸಹಕರಿಸಿದರು.
0 comments:
Post a Comment