ಬಂಟ್ವಾಳ, ಮಾರ್ಚ್ 15, 2022 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಲಡ್ಕ ಮೈದಾನದಲ್ಲಿ ನಡೆದ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಸೀಸನ್-6 ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಇಬ್ಬರು ಕ್ರೀಡಾ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರಮುಖ ಅಂಡರ್ ಆರ್ಮ್ ಕ್ರಿಕೆಟ್ ತಂಡಗಳಲ್ಲಿ ಕ್ರಿಕೆಟ್ ಆಟವನ್ನು ಪ್ರಸ್ತುತಪಡಿಸಿ ಇದೀಗ ಮಂಗಳೂರಿನ ಅಗ್ರ ಕ್ರಮಾಂಕ ಅಂಡರ್ ಆರ್ಮ್ ಕ್ರಿಕೆಟ್ ತಂಡವಾಗಿರುವ ಉರ್ವ ಯಂಗ್ ಫ್ರೆಂಡ್ಸ್ ತಂಡದ ನಾಯಕರಾಗಿರುವ ಸ್ಥಳೀಯ ಸಾಧಕ ಅಝ್ಮಲ್ ಪಿ ಜೆ ಹಾಗೂ ಸ್ಥಳೀಯ ಹಿರಿಯ ವಾಲಿಬಾಲ್ ಆಟಗಾರ ಅಬೂಬಕ್ಕರ್ ಸಿದ್ದೀಕ್ ಬಂಗ್ಲೆಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ಬಿ ರಮಾನಾಥ ರೈ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಅಮೆಚೂರು ಕಬಡ್ಡಿ ಎಸೋಸಿಯೇಶನ್ ಬಂಟ್ವಾಳ ತಾಲೂಕು ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲು, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನಾಕ ಮೆಲ್ಕಾರ್, ಅಬ್ದುಲ್ ಮಜೀದ್ ನಾಝ್, ಅಬ್ದುಲ್ ಹಕೀಂ ಉಲ್ಲಾಸ್, ಫಾರೂಕ್ ಎಫ್ ಆರ್ ಕೆ, ನಾಸಿರ್ ಗೂಡಿಬಳಿ, ರಫೀಕ್ ಎಂ ಆರ್, ರಿಯಾಝ್ ಆಲಡ್ಕ, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಪ್ರಮುಖರಾದ ಖಲಂದರ್ ಅಮ್ಟೂರು, ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ಅಬ್ದುಲ್ ರವೂಫ್ ಗುಡ್ಡೆಅಂಗಡಿ, ಶರೀಫ್ ಭೂಯಾ, ನಿಸಾರ್ ಅಕ್ಕರಂಗಡಿ, ಹನೀಫ್ ಅಕ್ಕರಂಗಡಿ, ಸಲಾಲ್ ಗೂಡಿನಬಳಿ, ಭೂಯಾ ಸ್ಪೋಟ್ರ್ಸ್ ಕ್ಲಬ್ ಪದಾಧಿಕಾರಿಗಳಾದ ಅಝರುದ್ದೀನ್ ಯು, ಚಪ್ಪು ಪಿ ಎಂ, ಶಫೀಕ್ ಯು, ಅಶ್ರಫ್ ಯು., ಹಬೀಬ್ ಬಿ, ರಶೀದ್ ಕತಾರ್, ರಿಝ್ವಾನ್ ಪಿಜೆ, ತೌಸೀಫ್ ಯು, ಹಬೀಬ್ ಬಿ, ಸದಕತ್, ಝುಬೈರ್, ನೌಫಲ್ ಬಿ, ನೌಫಲ್ ಯು, ಆರಿಫ್ ಭೂಯಾ, ನಿಝಾಂ ಜಿಬಿ, ಮುಝಮ್ಮಿಲ್ ಬಿ, ರಿಯಾಝ್ ಎಸ್ ಆರ್, ಇರ್ಶಾದ್ ಇಚ್ಚ, ಇಬ್ರಾಹಿಂ ಬಾವಾಜಿ, ಸಾದಿಕ್, ರಫೀಕ್ ಮಮ್ಮು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment