ಪುತ್ತೂರು, ಮಾರ್ಚ್ 03, 2022 (ಕರಾವಳಿ ಟೈಮ್ಸ್) : ಇಲಿ ಪಾಷಾಣ ಬೆರಸಿಟ್ಟಿದ್ದ ಬಾಳೆ ಹಣ್ಣು ಸೇವಿಸಿ ಅಸ್ವಸ್ಥಗೊಂಡಿದ್ದ ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚಾರ್-ಸಿ.ಆರ್.ಸಿ. ಕಾಲೊನಿ ನಿವಾಸಿ ಎಂ ಪ್ರಶಾಂತ ಅವರ ಪತ್ನಿ ಪೂರ್ಣಿಮಾ (23) ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ (ಮಾರ್ಚ್ 3) ಮೃತಪಟ್ಟಿದ್ದಾರೆ.
ಪೂರ್ಣಿಮಾ ಅವರು ಫೆಬ್ರವರಿ 24 ಂದು ರಾತ್ರಿ ತನ್ನ ಮನೆಯಲ್ಲಿ ಬಾಳೆ ಹಣ್ಣಿನಲ್ಲಿ ಇಲಿ ಪಾಷಾಣ ಬೆರೆಸಿ ಇಲಿಗಳಿಗೆ ಇಟ್ಟಿದ್ದು, ಮರುದಿನ ಅಂದರೆ ಫೆ 25 ರಂದು ಬೆಳಿಗ್ಗೆ ಮನೆಯೊಳಗೆ ಇಲಿಗಳು ಚೆಲ್ಲಾಪಿಲ್ಲಿ ಮಾಡಿದ್ದ ಬಾಳೆಹಣ್ಣುಗಳ ಪೈಕಿ ಒಂದು ಬಾಳೆಹಣ್ಣನ್ನು ಪೂರ್ಣಿಮಾಳು ತಿಂದಿದ್ದರು. ಸ್ವಲ್ಪ ಹೊತ್ತಿನಲ್ಲಿ ಪೂರ್ಣಿಮಾಳಿಗೆ ತಲೆ ತಿರುಗಿದಂತಾಗಿ ವಾಂತಿ ಮಾಡಲು ಪ್ರಾರಂಭಿಸಿದ ಹಿನ್ನಲೆಯಲ್ಲಿ ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ವೆನ್‍ಲಾಕ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದ ಪೂರ್ಣಿಮಾ ಗುರುವಾರ (ಮಾ 3) ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 07/2022 ಕಲಂ 174 ಸಿಆರ್‍ಪಿಸಿ ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment