ಪುತ್ತೂರು, ಮಾರ್ಚ್ 03, 2022 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 24/2006 ಕಲಂ 450, 380 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ದಿನಾಂಕ 14-03-2006 ರಿಂದ 16-03-2006 ರ ಮಧ್ಯೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮಹೇಂದ್ರ ಕುಮಾರ್ ಬಿನ್ ಸುಂದರ ನಾಯ್ಕ ಅವರ ಮನೆಯ ಬಾಗಿಲಿನ ಬೀಗದ ಕೊಂಡಿಯನ್ನು ಬಲತ್ಕಾರವಾಗಿ ತುಂಡರಿಸಿ ತೆಗೆದು ಒಳ ಪ್ರವೇಶಿಸಿ ಸೂಟ್ ಕೇಸಿನಲ್ಲಿದ್ದ ಸುಮಾರು 43,000/- ರೂಪಾಯಿ ಬೆಲೆಬಾಳುವ 50.930 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಆರೋಪಿಗಳಾದ ಸಂತೋಷ ಮತ್ತು ನಾಗರಾಜ್ ಬಳೆಗಾರ ಎಂಬವರನ್ನು ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕ ತಿಲಕ್ ಚಂದ್ರ ಅವರು ಸೊತ್ತು ಹಾಗೂ ಆರೋಪಿಗಳನ್ನು ದಸ್ತಗಿರಿ ಮಾಡಿ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿಕೊಂಡದ್ದರು. ಆಗಿನ ಪುತ್ತೂರು ನಗರ ಪೆÇಲೀಸ್ ಠಾಣೆಯ ಅಪರಾಧ ವಿಭಾಗದ ಪೆÇಲೀಸ್ ಉಪನಿರೀಕ್ಷಕ ಕೃಷ್ಣ ನಾಯ್ಕ್ ಅವರು ಆರೋಪಿಗಳ ಮೇಲೆ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಸದ್ರಿ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಸಿ ಸಿ ಸಂಖ್ಯೆ 864/2014 ರಂತೆ ವಿಚಾರಣೆ ನಡೆದು ದಿನಾಂಕ 03-03-2022 ರಂದು ಎ1 ಆರೋಪಿಯಾದ ಮಂಗಳೂರು ತಾಲೂಕು ಸುರತ್ಕಲ್ ಹೊನ್ನಕಟ್ಟೆ-ವಿದ್ಯಾನಗರ ನಿವಾಸಿ ಪ್ರಭಾಕರ್ ಬಳೆಗಾರ ಅವರ ಪುತ್ರ ನಾಗರಾಜ್ ಬಳೆಗಾರ (34) ಎಂಬಾತನಿಗೆ ಶಿಕ್ಷೆ ಪ್ರಕಟಿಸಿದ್ದು ಕಲಂ 457 ಐಪಿಸಿಗೆ ಸಂಬಂಧಿಸಿದಂತೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ. ಕಲಂ 380 ಐಪಿಸಿಗೆ ಸಂಬಂಧಿಸಿದಂತೆ 4 ವರ್ಷಗಳ ಕಾರಾಗೃಹ ವಾಸ ಹಾಗೂ 4 ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 5 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಆರೋಪಿಯು ಪ್ರಸ್ತುತ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
0 comments:
Post a Comment